- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾದ ತಂದೆ

Hasim [1]ಮಂಗಳೂರು : ಮಂಗಳೂರಿನ ಕದ್ರಿ ಬಳಿಯ ಆಳ್ವಾರೀಸ್ ರೋಡ್, ಫಾಲ್ಕಾಮ್ ಕ್ರಿಸ್ಟ್ ನಿವಾಸಿ 32 ವರ್ಷದ ಅಬ್ದುಲ್ ಹಾಸೀಮ್ ತನ್ನ 1 ವರ್ಷ 2 ತಿಂಗಳು ಹೆಣ್ಣು ಮಗುವಿನೊಂದಿಗೆ ಮಾರ್ಚ್ 23 ರಂದು ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ವ್ಯಕ್ತಿಯು 5.9 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಅಗಲ ಮುಖ, ಎಡ ಕೈಯಲ್ಲಿ ಕಪ್ಪು ಎಳ್ಳು ಮಚ್ಚೆ ಹೊಂದಿದ್ದು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ದಿನದಂದು ಹಳದಿ ಟಿ-ಶರ್ಟ್ ಧರಿಸಿರುತ್ತಾರೆ.

ಕಾಣೆಯಾದ ಹೆಣ್ಣು ಮಗು ಬಿಳಿ ಮೈಬಣ್ಣ, ದುಂಡು ಮುಖ, ಹೊಟ್ಟೆಯ ಎಡ ಭಾಗಕ್ಕೆ ಕಪ್ಪು ಎಳ್ಳು ಮಚ್ಚೆ ಇದ್ದು, ಕಾಣೆಯಾದ ದಿನ ಮಗು ಸ್ಲಿಪ್ ಮತ್ತು ಬಿಳಿ ಪ್ಯಾಂಪರ್ಸ್ ಧರಿಸಿರುತ್ತದೆ.

ಈ ಚಹರೆಯುಳ್ಳ ವ್ಯಕ್ತಿ ಹಾಗೂ ಮಗುವಿನ ಮಾಹಿತಿ ಪತ್ತೆಯಾದಲ್ಲಿ ಕದ್ರಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 2220520 ಅಥವಾ ಕಂಟ್ರೋಲ್ ರೂಮ್ ಸಂಖ್ಯೆ: 2220800, 2220801 ಸಂಪರ್ಕಿಸಬಹುದು ಎಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.