ಕೊರಗಜ್ಜನ ದೈವಸ್ಥಾನ ಅಪವಿತ್ರ : ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಆರೋಪಿಗಳು – ಇಬ್ಬರ ಬಂಧನ

6:07 PM, Thursday, April 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

Koragajja ಮಂಗಳೂರು : ಎರಡು ತಿಂಗಳ ಹಿಂದೆ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸಿ, ಅವಾಚ್ಯ ಪದಗಳ ಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಿ ಅಪಮಾನ ಮಾಡಲಾಗಿತ್ತು.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಏಪ್ರಿಲ್ 1 ರ ಗುರುವಾರ ಇಬ್ಬರು ಆರೋಪಿಗಳನ್ನು ಕೊರಗಜ್ಜನ ಕಾಣಿಕೆ ಡಬ್ಬಿಗೆ ತಪ್ಪು ಕಾಣಿಕೆ ಹಾಕಿ ಪೊಲೀಸರಿಗೆ ಶರಣಾಗಿದ್ದಾರೆ.

ಬಂಧಿತರನ್ನು ರಹೀಮ್ ಮತ್ತು ತೌಫಿಕ್ ಎಂದು ಗುರುತಿಸಲಾಗಿದೆ.

ಬುಧವಾರ  ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಮಾಡಿದ್ದಾನೆ. ಅಂದು ತನ್ನನ್ನು ಗೆಳೆಯನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ನಾನು ಹೊರಗೆಡೆಯೇ ಇದ್ದೆ. ಆದರೆ, ಆತ ಇತ್ತೀಚೆಗೆ ಹುಚ್ಚು ಹಿಡಿದಂತೆ ವರ್ತಿಸಿ ಗೋಡೆಗೆ ತಲೆ ಚಚ್ಚಿಕೊಂಡು ಮೃತಪಟ್ಟ ಸುದ್ದಿ ತಿಳಿದಿದೆ. ಇದೀಗ ನನ್ನ ಆರೋಗ್ಯವೂ ಸಹ ಕೆಡುತ್ತಿದ್ದು, ಕ್ಷಮೆ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದು ಸೇರಿದ್ದ ಜನರ ಮುಂದೆ ಅಂದು ನಡೆದ ಘಟನಾವಳಿ ಬಿಚ್ಚಿಟ್ಟಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ‘ಕಳೆದ ಮೂರು ತಿಂಗಳಲ್ಲಿ ದುಷ್ಕರ್ಮಿಗಳು ಆಕ್ಷೇಪಾರ್ಹ ವಸ್ತುಗಳನ್ನು ಕಾಣಿಕೆ ಡಬ್ಬಿಗಳಿಗೆ ಹಾಕಿರುವ ಕುರಿತು ಐದು ಪ್ರಕರಣಗಳು ಪಾಂಡೇಶ್ವರ, ಉಳ್ಳಾಲ, ಕದ್ರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ ರಹೀಮ್ ಮತ್ತು ತೌಫಿಕ್ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಎಮ್ಮೆಕೆರೆಯ ಮೈದಾನದಲ್ಲಿರುವ ಕೊರಗಜ್ಜ ಕಟ್ಟೆಯ ಪೂಜಾರಿಯನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದರು. ನೇಮೋತ್ಸವದ ಸಮಯದಲ್ಲಿ ಅವರನ್ನು ಕರೆಸಲಾಗಿದ್ದು ಅವರು ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

Koragajja ನವಾಜ್ ಎಂಬ ಇನ್ನೊಬ್ಬ ಆರೋಪಿಯನ್ನು ಇತರ ಇಬ್ಬರು ಆರೋಪಿಗಳ ಸ್ನೇಹಿತ ಒಂದೂವರೆ ವರ್ಷಗಳ ಹಿಂದೆ ದುಬೈನಿಂದ ಮರಳಿ ಬಂದಿದ್ದ. ಕಳೆದ ಒಂದೆರಡು ತಿಂಗಳುಗಳಲ್ಲಿ ಆತ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ನಿಧನನಾದ. ಇತ್ತೀಚೆಗೆ ಭಕ್ತರು ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜ ಕಟ್ಟೆಗೆ ನಡಿಗೆ ನಡೆಸಿದ್ದು ನಂತರ ತೌಫಿಕ್‌ಗೂ ನವಾಜ್‌ನಂತೆಯೇ ತೀವ್ರವಾದ ಆರೋಗ್ಯ ಸಮಸ್ಯೆ ಉಂಟಾಯಿತು. ಆ ಭಯದಲ್ಲಿ ಅವರು ಈ ಕೃತ್ಯವನ್ನು ಒಪ್ಪಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಕೊರಗಜ್ಜ ಕಟ್ಟೆಗೆ ಭೇಟಿ ನೀಡಿ ಆಕ್ಷೇಪಾರ್ಹ ವಸ್ತುಗಳನ್ನು ಕಾಣಿಕೆ ಡಬ್ಬಿಗೆ ಹಾಕಲು ರಹೀಮ್ ಮತ್ತು ತೌಫಿಕ್ ಎಂಬವರು ನವಾಜ್‌ಗೆ ಸಹಾಯ ಮಾಡಿದ್ದರು ಎನ್ನಲಾಗಿದೆ ಎಂದು ಎನ್ ಶಶಿಕುಮಾರ್ ಹೇಳಿದರು.

ಇನ್ನು ಈ ಆರೋಪಿಗಳ ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. ಅದರ ವಿಚಾರಣೆ ನಡೆಸಲಾಗುತ್ತಿದೆ. ನವಾಜ್ ಬಹಳ ನಿಗೂಢವಾಗಿ ಮಾತನಾಡುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರು ಮೂರು ಸ್ಥಳಗಳಲ್ಲಿ ಈ ಕೃತ್ಯ ಎಸಗಿದ್ದಾರೆ. ಮೂರು ಕೃತ್ಯವೂ ಒಂದೇ ರೀತಿ ಇದ್ದು ಕೈ ಬರಹದ ಪತ್ರದ ಪರಿಶೀಲನೆ ಅಗತ್ಯವಿದೆ. ತಪ್ಪೊಪ್ಪಿಕೊಳ್ಳಲು ಆರೋಪಿಗಳು ಇಬ್ಬರೂ ಸ್ವಯಂಪ್ರೇರಣೆಯಿಂದ ಮುಕ್ತೇಸರನ್ನು ಸಂಪರ್ಕಿಸಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English