ಸುರತ್ಕಲ್‌ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ

6:50 PM, Monday, April 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

dredgerಮಂಗಳೂರು : ಸುರತ್ಕಲ್‌ನ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ ಪತ್ತೆಯಾಗಿದೆ.

ಸುರತ್ಕಲ್‌ನ ಗುಡ್ಡಗಾಡು ಕೊಪ್ಲ ಬಳಿಯ ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ಭಗವತಿ ಪ್ರೇಮ್ ನಲ್ಲಿ ಶವ ಪತ್ತೆಯಾಗಿದೆ. ಈ ಡ್ರಜ್ಜರ್ ಒಡೆಯಲು ಕಂಪನಿಯೊಂದು ಗುತ್ತಿಗೆ ಪಡೆದಿದೆ. ಇದನ್ನು ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಲಾಗಿತ್ತು.

ಈ ಕಾವಲುಗಾರರಲ್ಲಿ ಉತ್ತರ ಕರ್ನಾಟಕ ಮೂಲದ ಶಂಕರ್ (32) ಎಂಬುವರು ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ಡ್ರಜ್ಜರ್ನಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English