ಗುಳಿಗ ಸಾನಿಧ್ಯದಲ್ಲಿ ಚಪ್ಪಲಿ ಹಾಕಿದ ದುಷ್ಕರ್ಮಿಗಳು

6:25 PM, Tuesday, April 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

guligajjaಮಂಗಳೂರು : ಗುಳಿಗ ಸಾನಿಧ್ಯದ ಕಟ್ಟೆಯ ಬಳಿ ಚಪ್ಪಲಿ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬ್ಲಪದವಿನಲ್ಲಿ ನಡೆದಿದೆ.

ಮುಚ್ಚಿರಕಲ್ಲು ಗುಳಿಗ ಸಾನಿಧ್ಯದಲ್ಲಿ ಸೋಮವಾರ ಈ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ.

ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು, ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ದುರಹಂಕಾರದಿಂದ ವಿಕೃತಿ ಮೆರೆದಿದ್ದು ಕೆಲವೇ ದಿವಸಗಳಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಆನಂತರ ಎಲ್ಲರಿಂದಲೂ ಕೋಮು ಸಾಮರಸ್ಯದ ಪ್ರತೀಕವಾಗಿ ಗುಳಿಗನ ಆರಾಧನೆ ನಡೆದುಕೊಂಡು ಬಂದಿತ್ತು.

ಮುಚ್ಚಿರ ಕಲ್ಲು ಕ್ಷೇತ್ರದ ಸಮಿತಿಯ ಮುಖಂಡರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ಗುಳಿಗಜ್ಜನ ಕಟ್ಟೆಯ ಬಳಿ ಕ್ರಿಕೆಟ್ ಟೂರ್ನಿ ನಡೆದಿದ್ದು, ಭಾನುವಾರ ಸಂಜೆ ಕಟ್ಟೆಯಲ್ಲಿ ಚಪ್ಪಲಿ ಪತ್ತೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English