- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ : ಕುಂಪಲದ ನೂರಾನಿ ಯತೀಂಖಾನ ದ ಮೆನೇಜರ್ ಬಂಧನ

Ayub [1]ಮಂಗಳೂರು : ಕುಂಪಲದ ನೂರಾನಿ ಯತೀಂಖಾನ ದ ಮೆನೇಜರ್  ಅಪ್ರಾಪ್ತ ಮಕ್ಕಳಿಗೆ  ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಕೇಂದ್ರದ ಮೇಲ್ವಿಚಾರಕನನ್ನು ಬಂಧಿಸಲಾಗಿದೆ.

ಮೂಲತಃ ಕೊಣಾಜೆಯ ಹಾಗೂ ಕುಂಪಲ ನೂರಾನಿ ಯತೀಂಖಾನ್ ಮಕ್ಕಳ ಕೇಂದ್ರದ ಮೇಲ್ವಿಚಾರಕ ಆಯ್ಯೂಬ್ (52) ಬಂಧಿತ ಆರೋಪಿಯಾಗಿದ್ದಾನೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿ,  ಬಾಲಕನ ತಂದೆ ಮೃತಪಟ್ಟಿದ್ದು, ತಾಯಿ ಮಾತ್ರ ಇದ್ದಾರೆ. ಕಳೆದ 4 ವರ್ಷಗಳಿಂದ ಕುಂಪಲದ ನೂರಾನಿ ಯತೀಂಖಾನ್ ಮಕ್ಕಳ ಕೇಂದ್ರದಲ್ಲಿದ್ದು, ವಿದ್ಯಾಭ್ಯಾಸ ಪಡೆಯುತ್ತಿದ್ದಾನೆ. ಸುಮಾರು 2 ತಿಂಗಳಿನಿಂದ ಈ ಬಾಲಕನಿಗೆ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ನಿನ್ನೆ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆರೋಪಿ ಇದೇ ರೀತಿ ಇನ್ನೂ 4 ಮಕ್ಕಳಿಗೆ ತೊಂದರೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡಸಲಾಗುತ್ತಿದೆ. ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಪ್ರಕರಣದ ಗಂಭೀರತೆ ಪರಿಗಣಿಸಿ ಮಂಗಳೂರು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಂ ಶಂಕರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ತನಿಖೆ ನಡೆಸಲಾಗುತ್ತಿದೆ.

ಕಳೆದ 30 ವರ್ಷಗಳಿಂದ ನೂರಾನಿ ಯತೀಂಖಾನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ದಾರುಲ್ ಮಸ್ಕಿ ನಗರದ ಕುಂಪಲದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇದರಲ್ಲಿ 79 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಇನ್ನೂ ನಾಲ್ಕೈದು ಮಕ್ಕಳಿಗೆ ಆರೋಪಿ ಇದೇ ರೀತಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

ಇಲ್ಲಿ ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ದೌರ್ಜನ್ಯಗಳಾಗಿವೆಯೇ ಎಂದು ನುರಿತ ವೈದ್ಯರ ತಂಡದಿಂದ ತಪಾಸಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಿಂದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇನ್ನೂ ಸುಮಾರು 20 ಪ್ರಕರಣಗಳಲ್ಲಿ ಮಕ್ಕಳಿಗೆ ಗದರಿಸೋದು, ಹೊಡಿಯುವುದು, ಕೆಲಸ ಮಾಡಿಸೋದು ಬೆಳಕಿಗೆ ಬಂದಿದೆ ಎಂದಿದ್ದಾರೆ.