- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದನವನ್ನು ಕಳವು ಮಾಡಿ ಮನೆಗೆ ತಂದು ಕಡಿದು 164 ಕೆ.ಜಿ. ಮಾಂಸ ಮಾಡಿದ ದನ ಕಳ್ಳರು

cow thieves [1]ಮಂಗಳೂರು  : ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸಮಾಡಿದ ಘಟನೆ  ಅಡ್ಡೂರು ಸಮೀಪ ಮನೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಅಡ್ಡೂರು ಪಾಂಡೇಲು ಗದ್ದೆ ಮನೆಯ ಮೊಹಮ್ಮದ್ ಎಂಬವರ ಮಗ  ಅಬ್ದುಲ್ ಮಜೀದ್ ಕಕ್ಕೆ, ಪ್ರಾಯ:35 ವರ್ಷ ಮತ್ತು  ಪಿ. ಮುಸ್ತಾಪ, ಪ್ರಾಯ: 30 ವರ್ಷ, ಈ ಇಬ್ಬರು ದನವನ್ನು ಕದ್ದು ತಂದು  ಕಡಿದು 164 ಕೆ.ಜಿ. ಮಾಂಸ ಮಾಡಿದ್ದರು.

ಖಚಿತ ಮಾಹಿತಿ ತಿಳಿದ  ಬಜಪೆ ಠಾಣಾ ಪಿಎಸ್ಐ ಪೂವಪ್ಪ ರವರ ನೇತ್ರತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, 2 ಜನ ಆರೋಪಿ ಸಮೇತ ಮಾರಾಟ ಮಾಡಲು ತಯಾರು ಮಾಡಿದ್ದ 164 ಕೆ.ಜಿ. ದನದ ಮಾಂಸ, ಚೂರಿ, ಕತ್ತಿ, ಇಲೆಕ್ಟ್ರಿಕಲ್ ತಕ್ಕಡಿ ಸಮೇತ ಸುಮಾರು ರೂ. 40,000/- ಮೌಲ್ಯ ಮಾಂಸ ಮತ್ತು ಸೊತ್ತು ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದೇ ವಾರದಲ್ಲಿ 2 ಕಡೆ ಅಕ್ರಮ ದನದ ಮಾಂಸ ಮಾಡುವವರ ವಿರುದ್ದ ಕಾರ್ಯಚರಣೆ ನಡೆಸಿದ ಬಜಪೆ ಪೊಲೀಸರ ಕ್ರಮ ಸಾರ್ವಜನಿಕರಲ್ಲಿ ಪ್ರಶಾಂಶನಿಯವಾಗಿದೆ.

ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಮಹೇಶ್ ಕುಮಾರ್ ಎನ್ ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ಕೆ. ಆರ್ ನಾಯ್ಕ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಪೂವಪ್ಪ ಹೆಚ್.ಎಂ, ಶ್ರೀಮತಿ ಕಮಲ ರವರು ಮತ್ತು ಸಿಬ್ಬಂದಿಗಳಾದ ಎ.ಎಸ್.ಐ. ಮೊಹಮ್ಮದ್, ರಾಮ ಪೂಜಾರಿ, ಸಿಬ್ಬಂದಿಗಳಾದ ಸಂತೋಷ ಡಿ.ಕೆ, ರಶೀದ್ ಶೇಖ್, ಪುರುಶೋತ್ತಮ, ರಾಜೇಶ್, ಗಿರೀಶ್, ವಕೀಲ ಎನ್ ಲಮಾಣಿ, ಲಕ್ಷ್ಮಣ ಕಾಂಬ್ಳೆ, ಸಿದ್ದಲಿಂಗಯ್ಯ, ಸಂಜೀವ ರವರುಗಳು ಕಾರ್ಯಚರಣೆಯಲ್ಲಿ  ಪಾಲ್ಗೊಂಡಿದ್ದರು.