- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೋದಿ ನರಕಯಾತನೆ ಅನುಭವಿಸಿ ಸಾಯಬೇಕು ಎಂದ ವ್ಯಕ್ತಿ ವಿರುದ್ಧ ದೂರು

modi [1]ಮಂಗಳೂರು  : ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ, ಅವರು ಬೀದಿಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ಫೇಸ್‌ ಬುಕ್‌ನಲ್ಲಿ ಮನವಿ ಮಾಡಿದ ಲುಕ್ಮನ್‌ ಅಡ್ಯಾರ್‌ ಎಂಬಾತ ನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ರಂಝಾನ್‌ ತಿಂಗಳ ಈ ಸಮಯದಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ವಿಷಬೀಜ ಬಿತ್ತುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್‌ ಅಸೈಗೋಳಿ ಮತ್ತು ನ್ಯಾಯವಾದಿ ಅಸ್ಗರ್‌ ಅಲಿ ಎಂಬವರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.