- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ ನೆಲಕ್ಕುರುಳಿದ ಸಾರ್ವಜನಿಕ ರಂಗಮಂದಿರ

Rangamandhira [1]ಬಂಟ್ವಾಳ: ಸುಮಾರು 38 ವರ್ಷಗಳ ಕಾಲ ಬಿ.ಸಿ.ರೋಡಿನ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ರಾಜಕೀಯ, ವೈಚಾರಿಕ, ರಂಗಭೂಮಿ ಚಟುವಟಿಕೆಗಳಿಗೆ ಇದ್ದ ಏಕೈಕ ವೇದಿಕೆ ಸಾರ್ವಜನಿಕ ರಂಗಮಂದಿರ ನೆಲಕ್ಕುರುಳಿದೆ.

2017ರಲ್ಲಿ ನಿರ್ಮಾಣಗೊಂಡ ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ಇರುವ ಈ ಕಟ್ಟಡದಲ್ಲಿ ಅಂದಿನಿಂದ ಚಟುವಟಿಕೆಗಳು ನಿಂತಿದ್ದವು. ಅದನ್ನು ತೆರವುಗೊಳಿಸುವ ಕುರಿತು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಶಿಥಿಲವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ. ‘

1983ರಲ್ಲಿ ಅಂದಿನ ತಹಶೀಲ್ದಾರ ಆಗಿದ್ದ ಕೆ.ಎ.ಎಸ್.ಅಧಿಕಾರಿ ಆರ್.ಕೆ.ರಾಜು ಅವರು ಇಲ್ಲಿ ರಂಗಮಂದಿರ ಕೊರತೆಯನ್ನು ಮನಗಂಡು ತಾಲೂಕು ಕಚೇರಿಯ ಎದುರೇ ಸಾರ್ವಜನಿಕರ ಮನವೊಲಿಸಿ, ಕಟ್ಟಡವೊಂದನ್ನು ಕಟ್ಟಿಸಿದ್ದರು. ಇದೀಗ ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ  ಬಿ.ಸಿ.ರೋಡಿನ ಹಳೆಯ ಕಟ್ಟಡ ರಂಗಮಂದಿರ ತೆರವುಗೊಳ್ಳುತ್ತಿದೆ.