ಕೇರಳ ರಾಜ್ಯದಲ್ಲಿ ಮೇ 8 ರಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್

2:06 PM, Saturday, May 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kerala Bundhಕಾಸರಗೋಡು : ಕೇರಳ ರಾಜ್ಯ ದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಲ್ಲಿ ಶನಿವಾರದಿಂದ  9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರ ಇಲ್ಲದೆ ಸಂಚರಿಸಿದ್ದಲ್ಲಿ ವಾಹನ ಜಪ್ತಿ ಅಥವಾ ದಂಡ ವಸೂಲಿ ಮಾಡಲಾಗುತ್ತಿದೆ.

ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಕಂಡು ಬರುತ್ತಿದ್ದು, ಅನಗತ್ಯವಾಗಿ ರಸ್ತೆಗಿಳಿದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಪೊಲೀಸ್ ಪಾಸ್ ಹೊಂದಿದವರಿಗೆ ಮಾತ್ರ ಇನ್ನು ಮುಂದೆ ಸಂಚಾರಕ್ಕೆ ಅನುಮತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಸಂಚರಿಸಲು ಪ್ರಮಾಣ ಪತ್ರ ಹೊಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರ.

ದಿನಸಿ , ಹಣ್ಣು ಹಂಪಲು , ತರಕಾರಿ , ಹಾಲು , ಮಾಂಸ, ಮೀನು ಮಾರಾಟಕ್ಕೆ ಅನುಮತಿನೀಡಲಾಗಿದೆ. ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಅಂಗಡಿ, ಹೋಟೆಲ್ ಗಳು ಬೆಳಿಗ್ಗೆ 6 ರಿಂದ ಸಂಜೆ 7.30ರ ತನಕ ತೆರೆಯಬಹುದು. ಬ್ಯಾಂಕ್ ಗಳು ವಾರದಲ್ಲಿ ಮೂರು ದಿನ ತೆರೆಯಬಹುದು. ಬೆಳಗ್ಗೆ 10 ರಿಂದ 1 ಗಂಟೆ ತನಕ ತೆರೆಯಬಹುದಾಗಿದೆ.

ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಪ್ರವೇಶ ಇಲ್ಲ. ಪೂರ್ವ ನಿಗದಿತ ವಿವಾಹಗಳಿಗೆ 50 ಮಂದಿಗೆ ಮಾತ್ರ ಅವಕಾಶ. ಅಂತ್ಯಕ್ರಿಯೆಗೆ 20 ಮಂದಿ ಮಾತ್ರ. ಬಾರ್, ಶೇಂದಿ ಅಂಗಡಿ ಬಂದ್ ಮಾಡಲಾಗಿದೆ. ಸರಕು ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಗೂಡಂಗಡಿ ತೆರೆಯುವಂತಿಲ್ಲ. ಗ್ಯಾರೇಜ್ ಗಳಿಗೆ ವಾರದ ಕೊನೆಯ ಎರಡು ದಿನ ತೆರೆಯಬಹುದು. ಹೊರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರು ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ ನೋಂದಾಯಿಸಬೇಕು. 14 ದಿನ ಕ್ವಾರಂಟೈನ್ ನಲ್ಲಿರಬೇಕು ಎಂದು ಪ್ರಕಟನೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English