- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಾಕ್ ಡೌನ್ : ತಿಂಗಳಿಗೆ ಕನಿಷ್ಟ ರೂ, 10,000 ಆರ್ಥಿಕ ಪರಿಹಾರ ಮೊತ್ತಕ್ಕಾಗಿ ಸಿಪಿಐ(ಎಂ) ಒತ್ತಾಯ

lock down [1]ಮಂಗಳೂರು  : ಕರ್ನಾಟಕ ಬಿಜೆಪಿ ಸರ್ಕಾರ ದಿನಾಂಕ 10-05-2021 ರಿಂದ 24-05-2021ರ ತನಕ ಕೊರೋನಾ ತಡೆಗಟ್ಟಲು ಲಾಕ್ ಡೌನ್ ಘೋಷಿಸಿದೆ. ಇದರಿಂದ ದುಡಿದು ಬದುಕುವ ಅಪಾರ ಸಂಖ್ಯೆಯ ಕಾರ್ಮಿಕರು ತೊಂದರೆಗೊಳಗಾಗಲಿದ್ದಾರೆ. ಮುಖ್ಯವಾಗಿ ಬೀಡಿ ಕಾರ್ಮಿಕರು , ಕಟ್ಟಡ ಕಾರ್ಮಿಕರು , ಬಸ್ಸು ಡ್ರೈವರ್ಸ್‍, ನಿರ್ವಾಹಕರು, ಆಟೋ, ಟೆಂಪೋ, ಮ್ಯಾಕ್ಸಿ ಕ್ಯಾಬ್, ಲೊರಿ ಚಾಲಕರಿಗೆ ಹೊಟೇಲ್ ಕಾರ್ಮಿಕರು, ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಮಿಕರು,‌ ಗುತ್ತಿಗೆ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ಹಾಗೂ ಇತರೆ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಟ ರೂ, 10,000 ಕೂಡಲೆ ಆರ್ಥಿಕ ಪರಿಹಾರ ಮೊತ್ತವನ್ನು ನೀಡಬೇಕು, ಮಾತ್ರವಲ್ಲದೆ ವಿದ್ಯುತ್ ಬಿಲ್, ವಾಹನ ಸಾಲದ ಕಂತು ಪಾವತಿಯನ್ನು ಮುಂದೂಡಬೇಕು.‌ ಮಾತ್ರವಲ್ಲದೆ ಕನಿಷ್ಟ 10 ಬಗೆಯ ಅಗತ್ಯ ವಸ್ತುಗಳನ್ನು ಉಚಿತವಾಗಿ ಪಡಿತರ ಚೀಟಿಯಲ್ಲಿ ನೀಡಬೇಕು. ಅಗತ್ಯ ವಸ್ತುಗಳನ್ನು ಕೊಂಡು ಕೊಳ್ಳಲು ಪ್ರತಿದಿನ ಸಾಕಷ್ಟು ಕಾಲಾವಕಾಶವನ್ನು ನೀಡಬೇಕೆಂದು ಸಿಪಿಐ(ಎಂ)ದ ಕ ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದೆ.