- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬ್ಲಾಕ್ ಫಂಗಸ್ ಕಾಯಿಲೆಗೆ ಉಡುಪಿ ಜಿಲ್ಲೆಯಲ್ಲಿ ಮೊದಲ ಬಲಿ

sooda [1]ಉಡುಪಿ : ಮ್ಯೂಕರ್ ಮೈಕೋಸಿಸ್- ಬ್ಲಾಕ್ ಫಂಗಸ್  ಕಾಯಿಲೆಗೆ ಸಂತೆಕಟ್ಟೆಯ 76 ವರ್ಷ ಪ್ರಾಯದ ಮಹಿಳೆ ಬಲಿಯಾಗಿದ್ದಾರೆ. ಇದು ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್  ಕಾಯಿಲೆಗೆ  ಮೊದಲ ಬಲಿ ಎಂದು ದಾಖಲಾಗಿದೆ.

ಸಂತೆಕಟ್ಟೆಯ 76 ವರ್ಷ ಪ್ರಾಯದ ಮಹಿಳೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿ ಕಳೆದೊಂದು ವಾರದಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆಯಲ್ಲಿದ್ದರು . ಅವರು ಚಿಕಿತ್ಸೆ ಫಲಿಸದೆ  ಇಂದು ಮೃತಪಟ್ಟಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪಡುಬಿದ್ರಿ ಸಮೀಪದ ನಂದಿಕೂರಿನ 45 ವರ್ಷದ ಪುರುಷರೊಬ್ಬರು ಚೇತರಿಸಿಕೊಳ್ಳುತಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಹರಿಹರ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಧಾರವಾಡ ಹಾಗೂ ರಾಣಿಬೆನ್ನೂರು ಜಿಲ್ಲೆಗಳ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದೀಗ ಸಂಪೂರ್ಣ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇಂದು ಹೊರಜಿಲ್ಲೆಯ ಇನ್ನೊಬ್ಬರು ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲೀಗ ಇಬ್ಬರು ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.