ಧಾರವಾಡ ಜಿಲ್ಲೆಯಲ್ಲಿ ವೀಕ್ ಎಂಡ್ ಲಾಕ್ ಡೌನ್ ವಿಸ್ತರಣೆ

8:16 PM, Sunday, May 23rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

shetterಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಕೊರೊನಾ ಸರಪಳಿ ಕಟ್ ಮಾಡಲು ಸರ್ಕಾರ ಹೊರಡಿಸಿರುವ ಲಾಕಡೌನ್ ಮಾರ್ಗಸೂಚಿಗಳನ್ನು ಹೊರತುಪಡಿಸಿ ಧಾರವಾಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ಇಂದು ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ವಾರದಲ್ಲಿ ಐದು ದಿನ ಕಟ್ಟುನಿಟ್ಟಿನ ಲಾಕಡೌನ್ ಜಾರಿ ಮಾಡಿದ್ದಾರೆ.

ಮೇ.27 ಹಾಗೂ 28 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ವೀಕೆಂಡ್ ಕರ್ಫ್ಯೂ ಮಾದರಿಯಲ್ಲೇ ವಾರದಲ್ಲಿ ಐದು ದಿನ ಲಾಕಡೌನ್ ಮಾಡಲು ಧಾರವಾಡ ಜಿಲ್ಲಾಡಳಿತ ನಿರ್ಧರಿಸಿದೆ.

ಜೂನ್ 7 ರವರೆಗೆ ಸರ್ಕಾರ ಲಾಕಡೌನ್ ವಿಸ್ತರಣೆ ಮಾಡಿದ್ದು, ಇದರ ಮಧ್ಯೆ ಜಿಲ್ಲಾಡಳಿತ ಒಂದಿಷ್ಟು ಮಾರ್ಪಾಡುಗಳನ್ನು ಮಾಡಿ ಬೆಳಿಗ್ಗೆ 6 ರಿಂದ 8 ಗಂಟೆ ಅವಧಿಯಲ್ಲಿ ಹಾಲು, ಹಣ್ಣು, ತರಕಾರಿ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಬೆಳೆಯುತ್ತಿರುವ ಕೊರೊನಾ ಚೈನ್ ಬ್ರೇಕ್ ಮಾಡಲು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

1 ಪ್ರತಿಕ್ರಿಯೆ - ಶೀರ್ಷಿಕೆ - ಧಾರವಾಡ ಜಿಲ್ಲೆಯಲ್ಲಿ ವೀಕ್ ಎಂಡ್ ಲಾಕ್ ಡೌನ್ ವಿಸ್ತರಣೆ

  1. ಗುರುನಾಥ ಹುಲಗೊರ, ಧಾರವಾಡ

    ಈ ರಿತಿ ವೀಕೆಂಡ್ ಲಾಕ್‌ ಡೌನ ಮುಂದೆ ವರಿಸುವುದರಿಂದ ದಿನಕೂಲಿಕಾರರು ,ಚಿಕ್ಕ ಚಿಕ್ಕ ವ್ಯಾಪಾರಿಗಳು ಭಿಕ್ಷಾಟನೆ ,ಚಿಂದಿ ಹಾಳಿ ಹಾಯುವರು, ಅಲೆಮಾರಿ ಜನಾಂಗದವರಿಗೆ
    ತೊಂದರೆ ಆಗಬಹುದು ಅನ್ನುವುದು ನನ್ನ ಅನಿಸಿಕೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English