- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೊನಾ ಬಂದಿದ್ದ ವ್ಯಕ್ತಿಗೆ ಬ್ಲಾಕ್ ಫಂಗಸ್, ಬೆಳ್ತಂಗಡಿಯಲ್ಲಿ ಮೊದಲ ಬಲಿ

black fungus [1]ಬೆಳ್ತಂಗಡಿ: ಕೊರೊನಾದ ಬಳಿಕ ಕಣ್ಣು ಮತ್ತು ಕಿಡ್ನಿ ಸಮಸ್ಯೆ ಉಂಟಾಗಿ ಬ್ಲಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ.

ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು

ಕೊರೋನಾ ಚಿಕಿತ್ಸತೆಯ ಬಳಿಕ  ಬ್ಲ್ಯಾಕ್ ಫಂಗಸ್ ಗೋಚರಿಸಿದ್ದು ಕಣ್ಣಿನ ಆಪರೇಷನ್ ನಡೆಸಿದ್ದರು, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೇ 27ರಂದು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಬಲಿಯಾಗಿದೆ.