- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯಾಸ್ ಚಂಡುಮಾರುತದ ಹಾನಿಯನ್ನು ಪರಿಶೀಲಿಸಲು ಬಂದ ಮೋದಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಯಿಸಿದ ಮಮತಾ ಬ್ಯಾನರ್ಜಿ

modi Banarji [1]ನವದೆಹಲಿ: ಯಾಸ್ ಚಂಡುಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಕಲಾಯಿಕುಂಡ್ ವಾಯುನೆಲೆಗೆ ಪ್ರಧಾನಿ ಆಗಮಿಸಿದಾಗ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.

ವಾಯುನೆಲೆಯಲ್ಲಿ ಪ್ರಧಾನಿಯೊಂದಿಗೆ ತರಾತುರಿಯಲ್ಲಿ 15 ನಿಮಿಷ ಸಂವಾದ ನಡೆಸಿ, ಪ್ರಧಾನಿ ಯೊಂದಿಗಿನ ಚಂಡಮಾರುತ ಹಾನಿ ಪರಾಮರ್ಶನಾ ಸಭೆಯಲ್ಲಿ ಮಮತಾ ಪಾಲ್ಗೊಳ್ಳದೆ  ಕೇವಲ ಹಾನಿಯ ವರದಿ ಕೊಟ್ಟು ಹೋದ ಘಟನೆ ನಡೆದಿದೆ.

ನೀವು ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಇಂದು ಬಂದೆ. ನಾನು ಮತ್ತು ನನ್ನ ಮುಖ್ಯ ಕಾರ್ಯದರ್ಶಿ ಈ ವರದಿಯನ್ನು ಸಲ್ಲಿಸಿದ್ದೇವೆ. ಈಗ ದಿಘಾದಲ್ಲಿ ಸಭೆ ಇದ್ದು, ಇಲ್ಲಿಂದ ಹೊರಡ ಬೇಕು  ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಬಂಗಾಳ ಚುನಾವಣೆ ಪ್ರಚಾರದ ನಂತರ ಇದು ಅವರಿಬ್ಬರ ಮೊದಲ ಮುಖಾಮುಖಿ ಭೇಟಿಯಾಗಿತ್ತು.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡುಮಾರುತದಿಂದ ಆದ ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಮೋದಿ ಬಂಗಾಳದ ಕಲಾಯಿಕುಂಡ್ ವಾಯುನೆಲೆಗೆ ಬಂದಾಗ, ಮಮತಾ ಬ್ಯಾನರ್ಜಿ ಕಾಯಿಸಿರುವುದಾಗಿ ಹೇಳಲಾಗಿದೆ.

ವಾಯುನೆಲೆಯಲ್ಲಿ ಪ್ರಧಾನಿಯವರಿಗಾಗಿ ಕಾಯುವಂತೆ ಮಾಡಿದ್ದು ಅವರನ್ನು ಕುಪಿತರನ್ನಾಗಿಸಿತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿ ತಿಳಿಸಿದೆ.

ಧಾಂಕರ್ ಅವರು ಟ್ವಿಟಿಸಿರುವ ಚಿತ್ರದಲ್ಲಿ ಪರಿಶೀಲನಾ ಸಭೆಯ ಆರಂಭಕ್ಕೆ ಮುನ್ನ ಮೋದಿ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಕುಳಿತಿದ್ದರೆ, ಅವರ ಬಲಭಾಗದಲ್ಲಿಯ ಖುರ್ಚಿಗಳು ಖಾಲಿ ಇರುವುದನ್ನು ತೋರಿಸಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಬ್ಯಾನರ್ಜಿ ಅವರ ಇಂತಹ ವರ್ತನೆ ವಿಷಾದನೀಯವಾಗಿದೆ ಮತ್ತು ಕೆಳ ದರ್ಜೆಯ ರಾಜಕೀಯದ ಸಂಕೇತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮೋದಿ ಪರಿಶೀಲನಾ ಸಭೆಗೆ ಆಗಮಿಸಿದಾಗ ಪ. ಬಂಗಾಳ ಸರ್ಕಾರದ ಯಾರೂ ಅಲ್ಲಿರಲಿಲ್ಲ. ಬ್ಯಾನರ್ಜಿ ಮತ್ತು ಮುಖ್ಯ ಕಾರ್ಯದರ್ಶಿ ಅದೇ ಅವರಣದಲ್ಲಿದ್ದರೂ ಪ್ರಧಾನಿ ಅವರನ್ನು ಬರಮಾಡಿಕೊಳ್ಳಲು ಬಂದಿರಲಿಲ್ಲ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಭಾರತೀಯ ಗಣರಾಜ್ಯದ ಇತಿಹಾಸದಲ್ಲಿಯೇ ರಾಜ್ಯವೊಂದರ ಮುಖ್ಯಮಂತ್ರಿ ಪ್ರಧಾನಿ ಮತ್ತು ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಜೊತೆಗೆ ಇಷ್ಟೊಂದು ಕೆಟ್ಟದಾಗಿ, ಅಗೌರವಯುತವಾಗಿ ಮತ್ತು ದುರಂಕಾರದಿಂದ ನಡೆದುಕೊಂಡಿರಲಲಿಲ್ಲ ಎಂದಿವೆ.

ಪ್ರಧಾನಿಗಳ ಎದುರು ವರದಿಯನ್ನು ಮಂಡಿಸುವಾಗಲೂ ತನ್ನ ಅಧಿಕಾರಿಗಳಿಗೆ ಬ್ಯಾನರ್ಜಿ ಅವಕಾಶ ನೀಡಿರಲಿಲ್ಲಎಂದು ಮೂಲಗಳು ಹೇಳಿವೆ. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ವಿಷಯ ಬ್ಯಾನರ್ಜಿ ಅವರಿಗೆ ಕಸಿವಿಸಿಯನ್ನುಂಟುಮಾಡಿತ್ತು ಎಂದು ಅವರು ತಿಳಿಸಿವೆ.

ಪರಾಮರ್ಶನಾ ಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಜೊತೆಗೆ ಪ್ರತ್ಯೇಕ ಸಮಯ ಕೇಳಲಾಗಿತ್ತು. ಸಭೆ ಇರುವ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಎಲ್ಲಾದಕ್ಕೂ ಒಪ್ಪಲಾಗಿತ್ತು. ಆದರೆ ಏಕೆ ಅವರನ್ನು ಕಾಯುವಂತೆ ಮಾಡಲಾಯಿತು ಎಂದು  ಮೂಲಗಳು ತಿಳಿಸಿವೆ