- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೊನಾ ಪಾಸಿಟಿವ್ ಇದ್ದ ಯುವಕ ಕಟ್ಟಡದಿಂದ ಹಾರಿ ಆತ್ಮಹತ್ಯೆ

Jumping [1]ಮಂಗಳೂರು : ಕೊರೊನಾ ಪಾಸಿಟಿವ್ ಇದ್ದ ಯುವಕನೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪಡೀಲ್ ಬಳಿ ಮೇ 27 ರ ಗುರುವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಸಮೀರ್ (30)ಎಂದು ಗುರುತಿಸಲಾಗಿದೆ. ಪಡೀಲ್ ನ 7 ನೇ ಮಹಡಿಯ ಫ್ಲ್ಯಾಟ್ ನಿಂದ ಸಮೀರ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸಮೀರ್ ಅವಿವಾಹಿತರಾಗಿದ್ದು, ಮೃತದೇಹ ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ.

ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.