- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಸ್ಪತ್ರೆಯಿಂದ ರೆಮಿಡಿಸಿವರ್ ಕದ್ದು ಮಾರಾಟ : ಪ್ರೇಮಿ ಬಂಧನ

Siddana Gowda [1]ಹುಬ್ಬಳ್ಳಿ: ಮಾರಕ‌ ಕೊರೊನಾ ವೈರಸ್ ನಿತ್ಯವೂ ನೂರಾರು ಜನರ ಪ್ರಾಣ ಬಲಿ ಪಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಐನಾತಿಗಳು ಮಾತ್ರ ಹಣ ಮಾಡಲು ಹೋಗಿ ಜೈಲು ಸೇರುತ್ತಿದ್ದಾರೆ.

ಹೌದು. ಹುಬ್ಬಳ್ಳಿಯಲ್ಲೂ ಕೂಡ ಕೊರೊನಾ ರೋಗಿಗಳ ಪಾಲಿನ ಸಂಜೀವಿನಿಯಾದ ರೆಮಡಸಿವರ್ ಇಂಜಕ್ಷನ್ ಕದ್ದು ಮಾರಾಟ ಮಾಡುತ್ತಿದ್ದ ಪ್ರೇಮಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಹುಬ್ಬಳ್ಳಿಯ ವೆಂಕಟೇಶ್ವರ ಕಾಲೋನಿಯ ಸಿದ್ದನಗೌಡ ಪಾಟೀಲ್ ಹಾಗೂ ವಿನಾಯಕನಗರದ ರಿಯಾ ವಡ್ಡರ ಎಂಬುವವರೇ ಬಂಧಿತ ಆರೋಪಿಗಳು. ಬೇರೆ ಬೇರೆ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಹಣ ಮಾಡಲು ಹೋಗಿ ಸಿಕ್ಕಿ ಬಿದಿದ್ದಾರೆ.

ನಗರದ ತತ್ವದರ್ಶಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ರಿಯಾ, ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರಾಗಿರುವ ತನ್ನ ಪ್ರಿಯಕರ ಸಿದ್ದನಗೌಡನಿಗೆ ರೋಗಿಯ ಬಳಿ ಇದ್ದ ರೆಮಡಿಸಿವರವನ್ನು ಕದ್ದುಕೊಂಡು ತಂದುಕೊಟ್ಟು, ಅದನ್ನು ಬೇರೆಯವರಿಗೆ ಮಾರಲು ಯತ್ನಿಸಿದಾಗ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯುರೋ.