- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುಟುಂಬಸ್ಥರು ಮುಂದೆ ಬಾರದಿದ್ದಲ್ಲಿ ಜಿಲ್ಲಾಡಳಿತದಿಂದಲೇ ಸಾವನ್ನಪ್ಪಿದ ಸೋಂಕಿತರ ಅಂತಿಮ ಸಂಸ್ಕಾರ

R Ashoka [1]ಬೆಂಗಳೂರು : ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕೆಲ ಕುಟುಂಬಸ್ಥರು ಮುಂದೆ ಬರದಿರುವ ಹಿನ್ನೆಲೆಯಲ್ಲಿ ಅಂತಹ ವ್ಯಕ್ತಿಗಳ ಮೃತದೇಹವನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿ ಅಂತಿಮ ವಿಧಿವಿಧಾನಗಳನ್ನು ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಅವರು ಖುದ್ದು ನೇತೃತ್ವವಹಿಸಿ ಸುಮಾರು ಐದು ನೂರಕ್ಕೂ ಹೆಚ್ಚು ಅಸ್ಥಿಗಳನ್ನ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಿದ್ದರು. ಈ ವೇಳೆಯೇ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಮುಂದಾಗದ ವೇಳೆ ಖುದ್ದು ಕಂದಾಯ ಇಲಾಖೆಯ ವತಿಯಿಂದಲೇ ಅಂತಿಮ ವಿಧಿ ವಿಧಾನಗಳನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅದರಂತೆ ಈಗ ಇಲಾಖೆಯ ವತಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಅದರಂತೆ ಆಯಾ ಜಿಲ್ಲೆಗಳಲ್ಲಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಹಾಗೂ ಅಂತಿಮ ವಿಧಿ ವಿಧಾನಗಳಿಗೆ ಜಿಲ್ಲಾಡಳಿತವೇ ಮುಂದಾಗಲಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.