- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದ.ಕ. ಜಿಲ್ಲೆಯಲ್ಲಿ4 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ

black fungus [1]ಮಂಗಳೂರು : ಕೊರೋನಾ ಸೋಂಕು ಸಕ್ರಿಯವಾಗಿರುವಾಗಲೇ ಮತ್ತೊಂದು ಅಪಾಯಕಾರಿ ರೋಗ ಬ್ಲ್ಯಾಕ್ ಫಂಗಸ್ ಜನರನ್ನು ಕಾಡುತ್ತಿದೆ.  ಗುರುವಾರ ದ.ಕ. ಜಿಲ್ಲೆಯಲ್ಲಿ4 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ.

ದ.ಕ. ಜಿಲ್ಲೆಯ ಒಬ್ಬರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದ ತಲಾ ಒಬ್ಬರಿಗೆ ಈ ರೋಗ ತಗುಲಿದೆ.

ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಸದ್ಯ 43 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದೆ. ಇದರಲ್ಲಿ 9 ದ.ಕ.ಜಿಲ್ಲೆಗೆ ಮತ್ತು 34 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿ ದ್ದಾಗಿದೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬ್ಲ್ಯಾಕ್ ಫಂಗಸ್ ಲಕ್ಷಣ ಹೊಂದಿದ್ದ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ ಐವರು ಸೇರಿ ಒಟ್ಟು 7 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.