- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಂಡನ್ ನಿಂದ ಔಷಧ ತರಿಸಿ ಬ್ಲ್ಯಾಕ್ ಫಂಗಸ್ ರೋಗಿಗಳ ಪ್ರಾಣ ಉಳಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

bharath shetty [1]ಸುರತ್ಕಲ್ : ಉಳ್ಳವರು ಲಸಿಕೆಯನ್ನು ಮಿತವ್ಯಯ ದರ ನೀಡಿ ಹಾಕಿಕೊಂಡರೆ ಬಡವರಿಗೆ ಲಸಿಕೆ ಸಿಗಲು ಸಾಧ್ಯವಿದ್ದು,ಈ ನಿಟ್ಟಿನಲ್ಲಿ ಲಾರ್ಡ್ ಕೃಷ್ಣ ಎಸ್ಟೇಟ್ ನಿವಾಸಿಗಳು ಮಾಡಿರುವ ಲಸಿಕೆ ಅಭಿಯಾನ ಮಾದರಿಯಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಇಲ್ಲಿನ ವೆಲ್ಫೇರ್ ಎಸೋಸಿಯೇಷನ್ ಆಯೋಜಿಸಿದ ಲಸಿಕೆ ಅಭಿಯಾನದಲ್ಲಿ ಮಾತನಾಡಿದ ಅವರು ಲಸಿಕೆ ಪಡೆದುಕೊಂಡರೂ ಕೋವಿಡ್ ಬರುವ ಸಾಧ್ಯತೆಯಿದ್ದರೂ ಜೀವಕ್ಕೆ ಹಾನಿಯಾದ ಪ್ರಕರಣಗಳು ವರದಿ ಆಗಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದು ನುಡಿದರು.
.
ಆರ್ ಎಸ್ ಎಸ್ ಮುಖಂಡರಾದ ಪ್ರಕಾಶ್ ಮಾತನಾಡಿ, ಮಹಾಮಾರಿ ಕೊರೊನಾ ದೇಶಕ್ಕೆ ಪಸರಿಸಿದೆ.ಸಾವು ನೋವು ನಮ್ಮ ಕಣ್ಣ ಆಗುತ್ತದೆ ಎಂಬುದನ್ನೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಲಸಿಕೆ ಅನಿವಾರ್ಯ ಹೆಲ್ಮೆಟ್ ಹಾಕಿಕೊಂಡು ಬೈಕ್ ಸವಾರ ಪ್ರಯಾಣಿಸಿದಾಗ ಹೇಗೆ ರಕ್ಷಣೆ ಸಿಗುತ್ತದೋ ಹಾಗೆಯೇ ಲಸಿಕೆ ನಮ್ಮ ಪ್ರಾಣಕ್ಕೆ ರಕ್ಷಣೆ ನೀಡುತ್ತದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳ ಬೇಕು  ಎಂದರು.

ಬ್ಲ್ಯಾಕ್ ಫಂಗಸ್ ಗೆ ಔಷದ ದೇಶದಲ್ಲಿ ಇಲ್ಲದೇ ಇದ್ದಾಗ ಶಾಸಕ  ಡಾ.ಭರತ್ ಶೆಟ್ಟಿ ಅವರು ಲಂಡನ್ ನಿಂದ ಔಷಧ ತರಿಸಿ ನೀಡಿದ್ದು ನಾಲ್ಕಾರು ಜನರ ಪ್ರಾಣ ರಕ್ಷಣೆ ಕಾರಣರಾಗಿದ್ದಾರೆ. ಇಂತಹ ಸೇವಾ ಮನೋಭಾವ ಇದ್ದಾಗ ಎಂತಹ ಕಠಿಣ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ಶಾಸಕರನ್ನು ಶ್ಲಾಘಿಸಿದರು.

ಸುರತ್ಕಲ್ ಲಾರ್ಡ್ ಕೃಷ್ಣ ವೆಲ್ಫೇರ್ ಎಸೋಸಿಯೇಷನ್ ಗೌರವಾಧ್ಯಕ್ಷ  ನಾಗೇಂದ್ರ ಭಾರಧ್ವಜ್,ಕಾರ್ಪೊರೇಟರ್ ಸರಿತ ಶಶಿಧರ್
ಎಸೋಸಿಯೇಷನ್ ಅಧ್ಯಕ್ಷ ಹೇಮೇಂದ್ರ ಆಳ್ವ, ಎಸೋಸಿಯೇಷನ್ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಐತಾಳ, ಇನ್ನರ್ ವೀಲ್  ಅಧ್ಯಕ್ಷೆ ಸುಮಿತ್ರ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.