- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ವಿವಿ: ಕಾಲೇಜುಗಳ ಸಂಯೋಜನೆಗೆ ಅರ್ಜಿ ಆಹ್ವಾನ

Mangalore University [1]ಮಂಗಳೂರು: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಗಳ ಅಧಿನಿಯಮ ದಡಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲಾ ಕಾಲೇಜು/ವಿದ್ಯಾಸಂಸ್ಥೆಗಳಿಂದ ಶೈಕ್ಷಣಿಕ ವರ್ಷ 2021-22 ನೇ ಸಾಲಿಗೆ ಶಾಶ್ವತ/ಮುಂದುವರಿಕೆ/ವಿಸ್ತರಣಾ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ಸಂಸ್ಥೆಗಳಿಂದ ಹೊಸ ಸಂಯೋಜನೆ ಕುರಿತಂತೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು www.onlineaffiliation.karnataka.gov.in [2] ಪೋರ್ಟಲ್‌ ಮುಖಾಂತರ ಜುಲೈ 08, 2021 ರ ಒಳಗಾಗಿ ಸಲ್ಲಿಸಬಹುದು. ಅರ್ಜಿಶುಲ್ಕ ರೂ.1000 ಪಾವತಿಸಿ (ಡಿಡಿ/ಚಲನ್‌/ಆರ್‌ಟಿಜಿಎಸ್‌) ಅರ್ಜಿಗಳ ಪ್ರತಿಯನ್ನು ಕುಲಸಚಿವರ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌- www.mangaloreuniversity.ac.in [3] ಗೆ ಭೇಟಿ ನೀಡಬಹುದು, ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.