- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರೊನಾ ಸಂದರ್ಭದಲ್ಲೇ ಅತಿಥಿಗಳ ಓಡಾಟಕ್ಕೆ 36 ಹೊಸ ವಾಹನಗಳನ್ನು ಖರೀದಿಸಿದ ರಾಜ್ಯ ಸರಕಾರ

innova-cresta [1]ಬೆಂಗಳೂರು:  ರಾಜ್ಯ ಸರಕಾರ ಅತಿಥಿಗಳ ಓಡಾಟಕ್ಕೆ 36 ಐಷಾರಾಮಿ ವಾಹನಗಳನ್ನು ಕೊಂಡಿದ್ದು ಇದಕ್ಕಾಗಿ 8.11 ಕೋಟಿ ರೂ. ವೆಚ್ಚ ಮಾಡಿದೆ. ಕರೊನಾದಂತಹ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದೀಚೆಗೆ ಸಂಕಷ್ಟಮಯ ಸನ್ನಿವೇಶ ಇರುವಾಗಲೇ ಸರಕಾರ ಈ ನಿರ್ಧಾರ ಕೈಗೊಂಡಿರುವುದು ಆಚಾರಿ ಮೂಡಿಸಿದೆ .

36 ಹೊಸ ವಾಹನಗಳ ಪೈಕಿ 35 ಇನ್ನೋವಾ ಕ್ರಿಸ್ಟಾ ಆಗಿದ್ದು, ಒಂದು ವೋಲ್ವೋ ಸೇರಿದೆ.

ರಾಜ್ಯಕ್ಕೆ ಬರುವ ಅತಿಥಿಗಳು, ಕೇಂದ್ರದಿಂದ ಬರುವ ಅಧಿಕಾರಿಗಳು, ರಾಜತಾಂತ್ರಿಕರು ಹಾಗೂ ವಿಶೇಷ ಸಂದರ್ಭಕ್ಕೆ ಈ ದುಬಾರಿ ವಾಹನಗಳನ್ನು  ಬಳಸಿಕೊಳ್ಳಲಾಗುತ್ತದೆಯಂತೆ. ಇನ್ನೊವಾ ಕ್ರಿಸ್ಟಾ ಬೆಂಗಳೂರಲ್ಲಿ ವಿಮೆ, ರೋಡ್ ಟ್ಯಾಕ್ಸ್ ಸೇರಿ ಆನ್ ರೋಡ್ ಪೆಸ್ ಸರಾಸರಿ 15.98 ಲಕ್ಷ ರೂ.ನಿಂದ 24.32 ಲಕ್ಷ ರೂ.ವರೆಗೆ ಇದ್ದು, 16 ಬೇರೆ ಬೇರೆ ಶ್ರೇಣಿಯವು ಇವೆ.