ನವ ಮಂಗಳೂರು ಬಂದರಿನಲ್ಲಿ ಸಮುದ್ರಕ್ಕೆ ಬಿದ್ದ ಲಾರಿ, ಡ್ರೈವರ್ ಸಾವು, ಕ್ಲಿನರ್ ನಾಪತ್ತೆ

1:44 PM, Monday, June 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Container lorry ಮಂಗಳೂರು: ನವ  ಮಂಗಳೂರು ಬಂದರಿನಲ್ಲಿ ಕಂಟೈನರ್ ಲಾರಿ ಸಮುದ್ರಕ್ಕೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿ ಕ್ಲೀನರ್ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ.

ಭಾನುವಾರ ನವ ಮಂಗಳೂರು ಪೋರ್ಟ್ 14ನೇ ಬರ್ತ್ ನಲ್ಲಿ ನಡೆದ ಈ ದುರಂತದಲ್ಲಿ 26 ವರ್ಷದ ಚಾಲಕ ರಾಜೇಸಾಬ್ ನಿಯಂತ್ರಣ ತಪ್ಪಿ ವಾಹನ ಸಮುದ್ರಕ್ಕೆ ಬಿದ್ದಿದೆ. ಡೆಲ್ಟಾ ಕಂಪನಿಯ ಕ್ಲೀನರ್ ಭೀಮಪ್ಪ ನಾಪತ್ತೆಯಾಗಿದ್ದಾರೆ.

ದುರಂತ ನಡೆದ ವೇಳೆ ಲಾರಿ ಖಾಲಿಯಿತ್ತು, ಹಡಗಿನಿಂದ ಕಬ್ಬಿಣದ ಅದಿರು ತುಂಬಲು ಲಾರಿ ಬಂದರಿಗೆ ಬಂದಿತ್ತು. ದುರಂತದ ಬಗ್ಗೆ ಪೈಲಟ್ ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆ ಗೆ ಮಾಹಿತಿ ನೀಡಿದ್ದಾರೆ.

ಸಿಐಎಸ್ಎಫ್ ಕ್ಯೂಆರ್ ಟಿ ಪಡೆಗಳ ಗಸ್ತು ತಂಡ ಟಗ್ ಬೋಟ್‌ನಲ್ಲಿ ಅಪಘಾತದ ಸ್ಥಳವನ್ನು ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಪಘಾತ ಸಂಭವಿಸಿದ ಒಂದು ಗಂಟೆಯ ನಂತರ ರಾಜೇಸಾಬ್ ಪತ್ತೆಯಾಗಿದ್ದಾನೆ. ಅವರನ್ನು ಎಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಕ್ಲೀನರ್ ಭೀಮಪ್ಪ ಇನ್ನೂ ಪತ್ತೆಯಾಗಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English