ವಾರಾಂತ್ಯ ಕರ್ಫ್ಯೂ : ಬ್ಯಾರಿಕೇಡ್​​​ಗಳನ್ನು ಹಾಕಿ ಬಂದೋಬಸ್ತ್

5:59 PM, Saturday, June 26th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

commissioner ಮಂಗಳೂರು : ಶುಕ್ರವಾರ  ರಾತ್ರಿಯಿಂದ ಸೋಮವಾರ ಬೆಳಗ್ಗೆ 7 ರ ವರೆಗೆ ಇರುವ ವಾರಾಂತ್ಯ ಕರ್ಫ್ಯೂಗೆ ಮಂಗಳೂರು ನಗರ ಭಾಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ನಗರ ಹೊರ ಭಾಗದಲ್ಲಿ ಜನರ ಓಡಾಟ ನಡೆಸುತ್ತಿದ್ದು, ಆ ಪ್ರದೇಶಗಳಲ್ಲಿಯೂ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ‌ ಶುಕ್ರವಾರ  ರಾತ್ರಿಯಿಂದ ಸೋಮವಾರ ಬೆಳಗ್ಗೆ 7 ರ ವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಬಂದೋಬಸ್ತ್ ಮಾಡುತ್ತಿದ್ದಾರೆ. ಸರ್ಕಾರದ ಆದೇಶಕ್ಕೆ ಜನರು ಸರಿಯಾಗಿ ಸ್ಪಂದನೆ ನೀಡಿದಲ್ಲಿ ಜನ ಜೀವನ ಆದಷ್ಟು ಶೀಘ್ರದಲ್ಲಿ ಯಥಾಸ್ಥಿತಿಗೆ ಬರಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದರು.

ಕಳೆದ ಒಂದೂವರೆ ತಿಂಗಳಿನಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಶೇ99.9ರಷ್ಟು ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಶೇ1ರಷ್ಟು ಜನರಿಂದ ಲಾಕ್‌ಡೌನ್ ನಿಯಮಾವಳಿಗಳು ಮತ್ತೆ ಮುಂದುವರಿಯುತ್ತಿದ್ದು, ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪೊಲೀಸರು, ಸರ್ಕಾರದ ಆದೇಶಕ್ಕಿಂತ ಹೆಚ್ಚಾಗಿ ಅನಗತ್ಯ ಸಂಚಾರ ಮಾಡುವವರನ್ನು ಮನೆಯಲ್ಲಿ ಪೋಷಕರೇ ತಡೆಯುವಂತಾಗಬೇಕು. ಕಾನೂನಿಂದ ಮಾತ್ರ ಕೊರೊನಾ ತಡೆಯಬಹುದು ಎನ್ನುವ ಸುಳ್ಳು. ನಮ್ಮ ಜವಾಬ್ದಾರಿಗಳನ್ನು ನಾವು ಅರಿತುಕೊಳ್ಳಬೇಕು ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English