ಕಾಂಗ್ರೆಸ್ ಕಚೇರಿಯಲ್ಲಿ ಕುದ್ಮುಲ್ ರಂಗರಾವ್ ಅವರ 162ನೇ ಜನ್ಮದಿನಾಚರಣೆ

7:38 PM, Tuesday, June 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

KudmalRangaRaoಮಂಗಳೂರು : ಕುದ್ಮುಲ್ ರಂಗರಾವ್ ಅವರ 162ನೇ ಜನ್ಮದಿನಾಚರಣೆಯನ್ನು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗದ ಘಟಕದ ವತಿಯಿಂದ ಇಂದು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಿತು.

ಮಾಜಿ ಶಾಸಕ ಜೆ. ಆರ್.ಲೋಬೊ, ದಿ.ಕುದ್ಮುಲ್ ರಂಗರಾವ್  ಅವರ  ಭಾವಚಿತ್ರಕ್ಕೆ ಮಾಲಾರ್ಪಣೆಗೈದು  ಮಾತನಾಡಿತ್ತಾ ಸಾಮಾಜಿಕ ಬದ್ಧತೆ, ದಲಿತೋದ್ಧಾರದ ಪರಿಕಲ್ಪನೆ, ಸ್ವಾರ್ಥರಹಿತ ಸೇವಾ ಮನೋಭಾವ ಅವರನ್ನು ಸಮಾಜದ ಉನ್ನತ ಸ್ಥಾನಕ್ಕೆ ಏರಿಸಿತ್ತು ಎಂದರು.

ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ವಿಪಕ್ಷ ನಾಯಕ ಎ.ಸಿ.ವಿನಯ್ ರಾಜ್, ಮಾಜಿ ಉಪ ಮೇಯರ್ ರಜನೀಶ್, ಮೋಹನಾಂಗಯ್ಯ ಸ್ವಾಮಿ, ಹೊನ್ನಯ್ಯ   ವಿಶ್ವಾಸ್ ದಾಸ್, ಲಾರೆನ್ಸ್ ಡಿಸೋಜ, ಟಿ.ಕೆ.ಸುಧೀರ್, ಪದ್ಮನಾಭ ಅಮೀನ್, ಎ.ಸಿ.ಜಯರಾಜ್, ನೀರಜ್ ಪಾಲ್, ಜಯರಾಜ್ ಕೋಟ್ಯಾನ್, ಶಾಂತಲಾ ಗಟ್ಟಿ, ಕೇಶವ ಮರೋಳಿ, ಅಪ್ಪಿ, ಲಿಯಾಕತ್ ಶಾ, ರಘುರಾಜ್ ಕದ್ರಿ, ದಿನೇಶ್ ಬಲಿಪಾತೋಟ, ಚೇತನ್ ಉರ್ವಾ, ಅಸ್ಲಂ ಬಂದರ್, ಜಯಂತಿ ಬಲಿಪಾತೋಟ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಬ್ಲಾಕ್ ಪರಿಶಿಷ್ಟ ಘಟಕ ಅಧ್ಯಕ್ಷ ಮಿಥುನ್ ಉರ್ವಾ ಸ್ವಾಗತಿಸಿದರು. ಪ್ರತಾಪ್ ಸಾಲ್ಯಾನ್ ವಂದಿಸಿದರು. ವಸಂತಿ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English