ಕಾರ್ಕಳದ ಜಾಗೃತಿ ಫೌಂಡೇಶನ್ ವತಿಯಿಂದ ರಾಜ್ಯಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ

10:43 PM, Thursday, July 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

jagruti-foundationಬೆಂಗಳೂರು  :  ಕಾರ್ಕಳದ ಜಾಗೃತಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ರವರ ಸಹಯೋಗದಲ್ಲಿ ಕರ್ನಾಟಕ ರಾಜ್ಯದ ಎಲ್ಲ 6090 ಗ್ರಾಮ ಪಂಚಾಯತ್ ಗಳಲ್ಲಿ ವನಮೋಹತ್ಸವ ಆಚರಣೆ ಮಾಡಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಮಾನ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿರಾದ ಕೆ.ಎಸ್.ಈಶ್ವರಪ್ಪರವರು ವಿಧಾನಸೌಧದ ಮೂರನೇ ಮಹಡಿಯ 314ರಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರು ಮಾತನಾಡಿ ಜಾಗೃತಿ ಫೌಂಡೇಶನ್ ಕಾರ್ಕಳ ಮತ್ತು ಕ್ಷೇಮಾಭೀವೃದ್ಧಿ ಸಂಘದವರು ಹಮ್ಮಿಕೊಂಡಿರುವ ಕೆಲಸ ಶ್ಲಾಘನೀಯವಾದದ್ದು, ಇದರಲ್ಲಿ ಅತ್ಯಂತ ಪ್ರಮುಖವಾದ ವಿಚಾರವೆಂದರೆ ಆ ಸಸಿಗಳ ನಿರ್ವಹಣೆಯನ್ಣೂ ಕೂಡ ಅವರೇ ಖುದ್ದಾಗಿ ಮಾಡಲು ಮುಂದೆ ಬಂದಿರುವುದು ಅಪರೂಪದಲ್ಲಿ ಅಪರೂಪವಾದದ್ದು ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ರವರು, ಫೌಂಢೇಶ್ ನ ಸಂಚಾಲಕರಾದ ಸಂತೋಷ ನಾಯಕ್, ಮತ್ತು ಕ್ಷೇಮಾಭೀವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಬೋರಯ್ಯ ರವರು, ಪ್ರಧಾನ ಕಾರ್ಯದರ್ಶೀ ರಾಜೇಶ್ ರವರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English