- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗುದನಾಳದಲ್ಲಿ 20,89 ಲಕ್ಷ ಮೌಲ್ಯದ ಅಕ್ರಮ ಚಿನ್ನ ಸಾಗಾಟ, ಆರೋಪಿ ವಶಕ್ಕೆ

Illigal Gold [1]ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20,89,800 ರೂ. ಮೌಲ್ಯದ 430 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಪತ್ತೆ ಮಾಡಿದ್ದಾರೆ.

ಕಾಸರಗೋಡು ನಿವಾಸಿ ದುಬಾಯಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು, ಈತ ಚಿನ್ನದ ಪೌಡರನ್ನು ಗಮ್ ಬೆರೆಸಿ ಗುದನಾಳದೊಳಗಿಟ್ಟು ಸಾಗಾಟ ಮಾಡಿದ್ದ. ಚಿನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕಸ್ಟಮ್ಸ್‌ನ ಉಪ ಆಯುಕ್ತ ಪ್ರವೀಣ್ ಕಂಡಿ, ಅಧಿಕಾರಿಗಳಾದ ರಾಕೇಶ್‌ಕುಮಾರ್, ವಿಕಾಸ್‌ಕುಮಾರ್, ಬಿಕ್ರಮ್ ಚಕ್ರವರ್ತಿ ಪಾಲ್ಗೊಂಡಿದ್ದರು.