- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬ್ರಾಹ್ಮಣರಿಗೂ ಜಾತಿ ಪ್ರಮಾಣಪತ್ರ ಸಿಕ್ಕಿದ್ದು ನಮ್ಮ ಸರ್ಕಾರದಿಂದ : ಕಂದಾಯ ಸಚಿವ ಆರ್ ಅಶೋಕ

Brahamin Kit [1]ಬೆಂಗಳೂರು  : ಬ್ರಾಹ್ಮಣ ಸಮುದಾಯದಲ್ಲಿ ಎಲ್ಲಾ ಬ್ರಾಹ್ಮಣರು ಶ್ರೀಮಂತರಾಗಿರೋದಿಲ್ಲಾ. ಅನೇಕರು ಬಡವರು ಇದ್ದಾರೆ. ನಾವು ಅವರಿಗೆ ಸಹಾಯ ಮಾಡಬೇಕಾಗಿದೆ ಎಂದು ಕಂದಾಯ ಸಚಿವ ಶ್ರೀ ಆರ್ ಅಶೋಕ ತಿಳಿಸಿದರು.

ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದ ಬ್ರಾಹ್ಮಣ ಸಮುದಾಯದ ೧೦೦೦ ಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಅವರು “ಜನರು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಮತ್ತು ನನಗೆ ಮತ ಹಾಕಿದ್ದಾರೆ. ಇದು ನನ್ನ ಜವಾಬ್ದಾರಿಯಾಗಿದೆ ನಾನು ಜನರ ಸೇವೆಯನ್ನು ಮುಂದುವರಿಸುತ್ತೇನೆ. ಬ್ರಾಹ್ಮಣರಿಗೆ ಈ ಹಿಂದೆ ಇಲ್ಲದಿದ್ದ ಜಾತಿ ಪ್ರಮಾಣಪತ್ರವನ್ನು ನೀಡಲು ಸ್ವಯಂಪ್ರೇರಣೆಯಿಂದ ಆದೇಶ ಹೊರಡಿಸಿದ್ದೇನೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ತಿಳಿಸಲಾಗಿದೆ. ಬಡ ಬ್ರಾಹ್ಮಣ ಬಾಲಕಿಯರ ಉಚಿತ ಶಿಕ್ಷಣಕ್ಕಾಗಿ ನಾವು ಪದ್ಮನಾಭನಗರ ಕ್ಷೇತ್ರದಲ್ಲಿ ಕಟ್ಟಡವನ್ನು ನಿರ್ಮಿಸಿದ್ದೇವೆ ಮತ್ತು ಭೂಮಿ ಮತ್ತು ಆರ್ಥಿಕ ನೆರವು ನೀಡಿದ್ದೇವೆ. ” ಎಂದು ಹೇಳಿದರು.

“ಕೋವಿಡ್ ನಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡವರು ದೇಹಗಳನ್ನು ಪಡೆಯಲು ವಿಫಲರಾಗಿದ್ದಾರೆ. ಮತ್ತೂ ಕೆಲವರು ಹೆದರಿ ಮೃತದೇಹವನ್ನು ಪಡೆಯಲು ಮುಂದೆ ಬಂದಿರಲಿಲ್ಲ. ಆದ್ದರಿಂದ, ನಾವು ಅಸ್ತಿ ವಿಸರ್ಜನೆ ಮಾಡಲು ನಿರ್ಧರಿಸಿದೆವು. ನಾನು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಧಾರ್ಮಿಕ ಕಾರ್ಯವನ್ನ ಮುಗಿಸಿದೆ. ಅದು ನನ್ನ ಕರ್ತವ್ಯ ಎಂದು ಬಲವಾಗಿ ನಂಬಿದ್ದೆ. ಈಗ, ನಾನು ಇನ್ನೂ ಒಂದು ಧಾರ್ಮಿಕ ಆಚರಣೆ ಮಾಡೋದಿದೆ. ಅದಕ್ಕಾಗಿ ನಾನು ಕೇರಳದ ವಿಷ್ಣು ಪಾಡಾಗೆ ಅಥವಾ ವಾರಣಾಸಿಗೆ ಭೇಟಿ ನೀಡಬೇಕಿದೆ. ನಾನು ಈ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ, ನನ್ನ ಜನ ನನಗೆ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ಶೀಘ್ರದಲ್ಲೇ ಈ ಕಾರ್ಯವನ್ನು ಸಹ ಮಾಡಿ ಮುಗಿಸುತ್ತೇನೆ”, ಎಂದರು.