- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೂರನೇ ಅಲೆ ಎದುರಿಸಲು ಪದ್ಮನಾಭನಗರ ಕ್ಷೇತ್ರದಲ್ಲಿ ಎರಡು ಮಕ್ಕಳ ಆಸ್ಪತ್ರೆ: ಸಚಿವ ಅಶೋಕ

R ashoka Hospital [1]ಬೆಂಗಳೂರು  : “ನಾವು ಕಳೆದ ಎರಡು ತಿಂಗಳಿಂದ ಆಹಾರ ಕಿಟ್‍ಗಳನ್ನು ಒದಗಿಸುತ್ತಿದ್ದೇವೆ ಮತ್ತು ಇನ್ನೂ ಹದಿನೈದು ದಿನಗಳವರೆಗೆ ಅದನ್ನು ಮುಂದುವರಿಸುತ್ತೇವೆ. ಎಲ್ಲಾ ಸಮುದಾಯಗಳು ಮತ್ತು ಕ್ಷೇತ್ರಗಳ ಜನರಿಗೆ ನಾವು ಕಿಟ್‍ಗಳನ್ನು ಒದಗಿಸಿದ್ದೇವೆ”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು “ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಪ್ರಮುಖ ಪಾಠವೆಂದರೆ ನಾವೆಲ್ಲರೂ ಒಂದೇ ಕುಟುಂಬದ ಭಾಗವಾಗಿದ್ದೇವೆ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಪರಸ್ಪರ ಸಹಕಾರ ನೀಡುವ ಅವಶ್ಯಕತೆಯಿದೆ. ಕೆಲವರು ಹೆತ್ತವರ ಶವಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ ಕ್ಷಣಗಳನ್ನು ನಾವು ನೋಡಿದ್ದೇವೆ. ಅನೇಕರು ಚಿತಾಭಸ್ಮವನ್ನು ಪಡೆಯಲು ನಿರಾಕರಿಸಿದರು. ನಾವು ಆ ಅಸ್ಥಿಗಳನ್ನು ಕಾವೇರಿ ಸಂಗಮದಲ್ಲಿ ಬಿಡುವ ಕಾರ್ಯವನ್ನು ಮಾಡಿದ್ದೇವೆ. ಈಗ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅದನ್ನು ನಿಭಾಯಿಸಲು ನಾವು ಈಗಲೇ ಸಜ್ಜಾಗುತ್ತಿದ್ದೇವೆ. ಮೊದಲನೇಯದಾಗಿ, ನಾವು ಡಿಸೆಂಬರ್ ವೇಳೆಗೆ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ಎರಡನೇಯದಾಗಿ, ತಜ್ಞರು ಎಚ್ಚರಿಸಿದಂತೆ ಈಗಾಗಲೇ ಎರಡು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ಒಂದು ಪೆಟ್ರೋಲ್ ಪಂಪ್ ಬಳಿ ಮತ್ತು ಇನ್ನೊಂದು ಹೊಸಕೆರೆಹಳ್ಳಿ ಬಳಿ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ” ಎಂದರು.

ಖ್ಯಾತ ನಟಿ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಹಾಗೂ ನಟಿ ಎಂ.ಎಸ್.ತಾರಾ, “ಈ ಬಿಕ್ಕಟ್ಟಿನ ಸಮಯದಲ್ಲಿ ಕಂದಾಯ ಸಚಿವ ಶ್ರೀ ಆರ್ ಅಶೋಕ ತಮ್ಮ ಜನರೊಂದಿಗೆ ನಿಂತಿದ್ದಾರೆ ಮತ್ತು ಜನರಿಗೆ ಆಹಾರ ಕಿಟ್ ನೀಡುವ ಮೂಲಕ ಅದ್ಭುತ ಸೇವೆ ಮಾಡುತ್ತಿದ್ದಾರೆ ಎಂದು ತಿಳಿದಾಗ ನನಗೆ ಸಂತೋಷವಾಗಿದೆ. ಅವರು ನನ್ನ ಹಿರಿಯ ಸಹೋದರನಂತೆ ಮತ್ತು ಬಡವರಿಗೆ ಅವರು ಮಾಡಿದ ಸೇವೆಯ ಬಗ್ಗೆ ನನಗೆ ಹೆಮ್ಮೆ ಇದೆ”, ಎಂದು ಹೇಳಿದರು.