- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೇರಳದ ತಿರುವನಂತಪುರದಲ್ಲಿ ಝಿಕಾ ಸೋಂಕು ಪ್ರಕರಣ ಹೆಚ್ಚಳ, ದ.ಕ. ಜಿಲ್ಲೆಯಲ್ಲಿ ಕಟ್ಟೆಚ್ಚರ

Zhika [1]ಮಂಗಳೂರು :  ಕೇರಳದ ತಿರುವನಂತಪುರದಲ್ಲಿ ಝಿಕಾ ಸೋಂಕು ಪ್ರಕರಣಗಳು ಹೆಚ್ಚಿದ್ದು. ಕೇರಳದ ಗಡಿಭಾಗ ದ.ಕ. ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ದೇಶನ ನೀದಿದ್ದಾರೆ.

ಕೇರಳದಿಂದ ಸಾಕಷ್ಟು ಜನರು ಶಿಕ್ಷಣ ಹಾಗೂ ಆರೋಗ್ಯ, ಉದ್ಯೋಗ ಸಂಬಂಧಿತ ಕಾರ್ಯಗಳಿಗೆ ಬಂದು ಹೋಗುತ್ತಿರುವುದು ಸಾಮಾನ್ಯ. ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಝೀಕಾ ಸೋಂಕು ಹೊಂದಿರುವ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ತೆರೆದ ಸ್ವಚ್ಛ ನೀರಿನ ಸಂಗ್ರಹಣೆಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಛಾವಣಿಗಳಲ್ಲಿ ನಿಂತ ನೀರು, ಟಯರ್, ಘನತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುತ್ತವೆ.