ಮಂಗಳೂರು : ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದು 13ಕ್ಕೂ ಅಧಿಕ ವಾಹನಗಳು ಜಖಂ

9:12 PM, Saturday, July 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

APMC-compound ಮಂಗಳೂರು :  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡ ಅವರಗೋಡೆಯೊಂದು ಬಿದ್ದು ಸುಮಾರು ಹದಿಮೂರು ದ್ವಿಚಕ್ರವಾಹನಗಳು ಜಖಂ ಗೊಂಡ ಘಟನೆ ಶನಿವಾರ ಸಂಜೆ ಮಂಗಳೂರು ಹಳೆಯ ಬಂದರ್‌ ನಲ್ಲಿ ನಡೆದಿದೆ.

ಬಂದರ್‌ನ ನಲಪಾಡ್ ಕುನಿಲ್ ಟವರ್ಸ್‌ಗೆ ಹೊಂದಿಕೊಂಡಂತಿರುವ ಎಪಿಎಂಸಿ ಯಾರ್ಡ್‌ನ ತಡೆಗೋಡೆ ಕುಸಿದ ಪರಿಣಾಮ  13ಕ್ಕೂ ಅಧಿಕ ವಾಹನಗಳು ಜಖಂಗೊಂಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಅಪಾರ್ಟ್‌ಮೆಂಟ್‌ನಲ್ಲಿ ನೂರಕ್ಕೂ ಹೆಚ್ಚು ಫ್ಲಾಟ್‌ಗಳಿದ್ದು, ಬಹುತೇಕ ಮಕ್ಕಳು ಕಟ್ಟಡದ ಆವರಣದಲ್ಲಿ ಆಟ ಆಡುವಾಡುತ್ತಾರೆ, ಅದೃಷ್ಟವಶಾತ್ ಶನಿವಾರ ಸಂಜೆ ವೇಳೆ ಮಳೆ ಬರುತ್ತಿದ್ದರಿಂದ ಮಕ್ಕಳು ಹೊರಬಂದಿಲ್ಲ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ ಅಪಾರ್ಟ್ ಮೆಂಟ್ ನಿವಾಸಿಗಳು ಹೇಳಿದ್ದಾರೆ.

ಎಪಿಎಂಸಿ ಯಾರ್ಡ್‌ನ ತಡೆಗೋಡೆ ಸಂಪೂರ್ಣವಾಗಿ ಸಿಥಿಲಗೊಂಡ ಕಾರಣ  ಕುಸಿದಿದ್ದು, ತಡೆಗೋಡೆಯ ಅವಶೇಷಗಳು ನಲಪಾಡ್ ಟವರ್ಸ್‌ನ ಕಾಂಪೌಂಡ್‌ನ್ನು ಸೇರಿದಂತೆ ಆವರಣದುದ್ದಕ್ಕು ಹರಡಿಕೊಂಡಿದೆ.

APMC-compoundಘಟನೆಯಲ್ಲಿ 13ಕ್ಕೂ ಹೆಚ್ಚು ವಾಹನಗಳು ತಡೆಗೋಡೆಯ ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದು, ಅಲ್ಲದೆ ಕಟ್ಟಡದ ಆವರಣದಲ್ಲಿದ್ದ ನೀರಿನ ಬಾವಿಯಲ್ಲಿ ಅರ್ಥ ಭಾಗದಷ್ಟು ಅವಶೇಷಗಳಿಂದ ತುಂಬಿಹೋಗಿದೆ.

ಬಾವಿಯ ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಸುಮಾರು ಒಂದೂವರೆ ಅಡಿ ಅಗಲ, 25 ಅಡಿ ಎತ್ತರ ಹಾಗೂ 100 ಅಡಿಗೂ ಹೆಚ್ಚು ಉದ್ದದ ತಡೆಗೋಡೆ ಧರಾಶಾಹಿಯಾಗಿದೆ. ಎಪಿಎಂಸಿ ಯಾರ್ಡ್‌ನಲ್ಲಿ ತಡೆಗೋಡೆಗೆ ತಾಗಿಕೊಂಡು ಸ್ಮಾರ್ಟ್‌ಸಿಟಿ ಕಾಮಗಾರಿಯ ಹೊಯಿಗೆ ಮೊದಲಾದ ವಸ್ತುಗಳನ್ನು ಹಾಕುವುದರಿಂದ  ಗೋಡೆ ಕುಸಿದಿದೆ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English