- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ತೀವ್ರ ನಿಗಾ ಘಟಕದಲ್ಲಿ

oscar faradise [1]ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಫ್ಲ್ಯಾಟ್ ನಲ್ಲಿ  ಜಾರಿ ಬಿದ್ದು  ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಮಂಗಳೂರು ಅತ್ತಾವರದಲ್ಲಿರುವ ಫ್ಲ್ಯಾಟ್ ನಲ್ಲಿ ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದ ಆಸ್ಕರ್ ಫರ್ನಾಂಡಿಸ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಇನ್ನು ಭಾನುವಾರ ಜಾರಿ ಬಿದ್ದ ಸಮಯ ಯಾವ ಗಾಯವಾಗಿಲ್ಲ ಎಂಬ ನಿರ್ಲಕ್ಷ್ಯದಿಂದಿದ್ದ ಫರ್ನಾಂಡಿಸ್ ಅವರು ಅದೇ ದಿನ ಸಂಜೆ ಡಯಾಲಿಸಿಸಿ ಗೆ ತೆರಳಿದ್ದಾಗ ತಲೆಯ ಒಳಭಾಗಕ್ಕೆಪೆಟ್ಟು ಬಿದ್ದಿರುವುದು ಅರಿವಾಗಿದೆ.

ಸಧ್ಯ ಮಂಗಳುರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಮೂಲಗಳು ಹೇಳಿದೆ.