ಕೊಚ್ಚಿ ತಿರುಮಲ ದೇವಳದಲ್ಲಿ ಕಾಶೀ ಮಠದ ಪೀಠಾಧಿಪತಿಗಳಾದ ಶೀಮದ್ ಸಂಯಮೀ೦ದ್ರ ತೀರ್ಥ ಶ್ರೀಪಾದಂಗವರ ಚಾತುರ್ಮಾಸ

4:43 PM, Monday, July 26th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

sayamindraಮಂಗಳೂರು :  ಸುಕೃತ ಕೋಟಿ ಲಭ್ಯ ಮನುಷ್ಯ ಜೀವನದಲ್ಲಿ ಸತ್ ಕರ್ಮ ಮಾಡುತ್ತಿರುವುದರ ಉದ್ದೇಶ ಯಜ್ಞ-ತಪಸ್ಸು- ದಾನ ಸತ್ ಕರ್ಮಗಳು. ಯಜ್ಞಗಳು ಹಲವಿಧ ದಯಾ-ಕ್ರಮ- ಜ್ಞಾನ-ಯೋಗ-ಸ್ವಧ್ಯಾಯ ಇತ್ಯಾದಿ. ತಮ್ಮ ಯೋಗ್ಯತಾನುಸಾರ ಉತ್ತಮ-ಸಾತ್ವಿಕ ಕರ್ಮ-ಚಿಂತನೆ-ಜೀವನ ಮಾನವನ ಸಹಜ ಶೈಲಿ.

ಈ ವರ್ಷದ 12 ತಿಂಗಳುಗಳಲ್ಲಿ 4 ತಿಂಗಳ ವೃತವೇ ಜಾತುರ್ಮಾಸ ವೃತ ದೈವಿಕ-ದೈಹಿಕ-ಭೌತಿಕ-ಆಧ್ಯಾತ್ಮೀಕವಾಗಿ ಯಾವುದೇ ರೀತಿಯಲ್ಲಿ ಚಿಂತನೆ ಮಾಡಿದರು-ಮಾಡದಿದ್ದರೂ ಅದರ ಗುಣ ಅದಕ್ಕೆ ಇದ್ದೇ ಇದೆ.ನಾವು ಹೇಳುವುದಕ್ಕಿಂತ ನಡತೆಯಲ್ಲಿ ಮಾಡಿ ತೋರಿಸುವ ಭಾರತೀಯ ವೇದ ಧರ್ಮದವರು,ಭಾರತೀಯರು, ಇಲ್ಲಿ ಧರ್ಮಕ್ಕೆ ನಾಶವಿಲ್ಲ.ಸನಾತನ ಧರ್ಮ-ಸರ್ವರ ಸುಖ ಬಯಸುತ್ತದೆ.

ನಮ್ಮ ವಿಶ್ವಾಸದಂತೆ ಆಷಾಢ ಏಕಾದಶೀ ಶಯನೀ ಏಕಾದಶೀ ಪರಮಾತ್ಮನು ನಿದ್ರಿಸುವನು.ನಿದ್ರೆಯಲ್ಲಿ ಹಲವು ವಿಧ ನಾವು ತಿಳಿದಂತೆ ಈ ನಿದ್ರೆ ಅಲ್ಲ.ಪರಮಾತ್ಮನ ನಿದ್ರಾ ಸಮಯ ದಕ್ಷಿಣಾಯನ ಇತ್ಯಾದಿ. ಮಳೆಗಾಲ ಮಾಡಲು ಇಂದೂ ಕಷ್ಟಕರ ಕಾಲ .ವ್ಯವಹಾರದವರಿಗೂ ಕಡಿಮೆ ಕೆಲಸದ ಕಾಲ.ಶಾಕವೃತ-ಕ್ಷೀರವೃತ-ದಧಿವೃತ-ದ್ವಿದಳ ವೃತವೆಂದು ವೃತ ಸ್ವೀಕಾರದ ನಂತರ ದೇವರ ವಿಶೇಷ ಪೂಜ-ಜಪಾದಿಗಳ ಸಹಿತ ಸತ್ ಚಿಂತನೆಯೊ೦ದಿಗೆ ಕಾಲ ಕಳೆಯುವುದು ಇದೇ ಸಮಯದಲ್ಲಿ ನಾಗ ಪಂಚಮಿ ವೃತಾದಿ ಗಣೇಶ,ಅನಂತ ನವರಾತ್ರಿ ಇತ್ಯಾದಿ ವೃತಗಳು ಯಾಂತ್ರಿಕವಾಗದೇ ಇವುಗಳನ್ನು ತಿಳಿದು ಶ್ರದ್ಧೆಯಿಂದ ಆಚರಿಸುವುದು ಅಗತ್ಯ.ಸಕಾಲಿನ ಪತ್ರ-ಪುಷ್ಪ-ಕಂದ- ಮೂಲ-ಆಹಾರ ಶ್ರದ್ದೇಯ.ಸರ್ವರೂ ಆಚರಿಸುತಿದ್ದ ಈ ಚಾತುರ್ಮಾಸ ವೃತ ಈಗ ಯತಿಗಳು ಅಂದರೆ ಸನ್ಯಾಸಿಗಳು ತಮ್ಮ ತಮ್ಮ ಸಂಪ್ರದಾಯದ೦ತೆ ನಾಲ್ಕು ತಿಂಗಳು ನಾಲ್ಕು ಪಕ್ಷ,ನಾಲ್ಕು ವಾರ ಹೀಗೆಲ್ಲ ಆಚರಿಸುವುದು ಕಂಡು ಬರುತ್ತಿದೆ.

ಶ್ರೀಮಾದ್ ವಿಜಯೇಂದ್ರ ತೀರ್ಥರು ಅನುಗ್ರಹಿಸಿದ ಧರ್ಮಪೀಠ ಶ್ರೀ ಕಾಶೀಮಠ ಸಂಸ್ಥಾನ. ಪ್ರಥಮ ಮಠ ವಾರಣಾಸಿಯ ಬ್ರಹ್ಮಘಾಟ್ ನಲ್ಲಿ ಇದ್ದು ಇಂದು ಸಮಸ್ತ ಭಾಗದಲ್ಲಿ ಶಾಖಾಮಠಗಳೂ ಇದ್ದು ಗೌಡ ಸಾರಸ್ವತ ಬ್ರಾಹ್ಮಣ ಕಾಶೀಮಠೀಯ ಶಿಷ್ಯ ವರ್ಗದವರಿಗೆ ಅಭಿಮಾನ ಗೌರವದ ಸಂಗತಿ ಪ್ರಸ್ತುತ ಪೀಠಾಧಿಪತಿಗಳಾದ ಶೀಮದ್ ಸಂಯಮೀ೦ದ್ರ ತೀರ್ಥ ಶ್ರೀಪಾದಂಗವರೂ ಈ ಪ್ಲವ ನಾಮ ಸಂವಸ್ಸರದ ಚಾತುರ್ಮಾಸ ವ್ರತವನ್ನು ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ದೇವಾಲಗಳಲೊಂದಾದ ಕೇರಳ ರಾಜ್ಯದ ಕೊಚ್ಚಿ ಯಲ್ಲಿರುವ ಕೊಚ್ಚಿ ತಿರುಮಲ ದೇವಳದಲ್ಲಿ ಸ್ಥಾನಾರಾಧ್ಯ ಶ್ರೀವ್ಯಾಸರಘುಪತಿ ನರಸಿಂಹರಾದಿ ಪರಿವಾರ ದೇವತೆಗಳೊಂದಿಗೆ ವೈಭವಪೂರ್ಣ ಪೂಜ-ಪುರಸ್ಕಾರ ನಿತ್ಯಭಜನೆ ಸ್ತುತ್ರಪಾಠ-ವೇದಾದಿ ಪಾರಾಯಣಗಳೊಂದಿಗೆ ಸಾಗುತ್ತಿದೆ.
ಆಷಾಢ ಬಹುಳ ಪಂಚಮಿಗೆ ವ್ರತ ಸ್ವೀಕಾರದಂದು ಶ್ರೀ ದೇವರಿಗೆ ಊಧ್ವಾರ್ಜನೆ-ಶತಕಲಶ ಪವಮಾನ ಮಹಾವಿಷ್ಣು-ಲಘುವಿಷ್ಣು-ಸಂಹಿತಾಕಲಶ-ಕನಕಾಭಿಶೇಕಗಳು ವಿಶೇಷ ಅಲಂಕಾರ ತಪ್ತ ಮುದ್ರಧಾರಣೆ-ಸಭಾಕಾರ್ಯಕ್ರಮಗಳು ಜರುಗುವುದು.ಶ್ರೀ ಮದ್ ಸುಕೃತೀಂದ್ರ ಶ್ರೀಪಾದಂಗಳವರ ಪ್ರಿಯ ಶಿಷ್ಯರಾದ ೯೦ ದಶಕಗಳ ಧೀರ್ಘ ಸಫಲ-ತಪಸ್ವಿ ಯತಿ ಧರ್ಮ ಪಾಲನೆಯೊಂದಿಗೆ ಪೀಠಾಧೀಶರಾಗಿ ರಾರಾಧನೆ ಸಮಗ್ರ ಸಮಾಜವನ್ನು ಉದ್ಧರಿಸಿದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಚರಣ ಕರಕಮಲ ಸ೦ಜಾತರಾದ ಶ್ರೀಮದ್ ಸಂಯ್ಯಮೀ೦ದ್ರ ತೀರ್ಥರು ತಮ್ಮ ಅಚಲ ಹರಿಗುರು ಭಕ್ತಿ-ವಿಶ್ವಾಸಗಳಿಂದ ನಿಯಮ ಬದ್ಧ ತಪಸ್ವಿಗಳಾಗಿ ಗುರುಗಳು ನಡೆದ ದಾರಿಯಲ್ಲಿ ಸದಭಿವೃದ್ಧಿಯೊಂದಿಗೆ ದಿಗ್ವಿಜಯ ನಡೆಸುತ್ತಿದ್ದಾರೆ.ಸಮಾಜದಲ್ಲಿ ದೇವ-ಧರ್ಮ-ಆಚಾರ ವಿಚಾರ-ಸಂಪ್ರಧಾಯ ದೇವಾಲಯಗಳ ಉದ್ಧಾರ-ಶಿಕ್ಷಣ-ವ್ಯವಹಾರ-ದುಖಃ ದೂರಮಾಡುತ್ತ ಸ್ವ ಶಿಷ್ಯ ವರ್ಗದವರನ್ನು ಅನುಗ್ರಹಿಸುತ್ತಿದ್ದಾರೆ.

2002 ರಲ್ಲಿ ಗಂಗಾತೀರದ ಗಂಗಾದ್ವಾರ(ಹರಿದ್ವಾರ)ದಲ್ಲಿ ದೀಕ್ಷಾ ಸ್ವೀಕೃತರಾದ ಸಂಯಮೀ೦ದ್ರ ತೀರ್ಥರು ದೀರ್ಘಕಾಲ ಅಧ್ಯಯನ ಗುರು ಸಹವಾಸದಿಂದ ಅನುಭವ ಪಡೆದು ಸಕಲ ಜವಬ್ದಾರಿಯನ್ನು ಶ್ರೀ ಹರಿಗುರು ಪೂಜಾ ರೂಪದಲ್ಲಿ ನಡೆಸುತ್ತಿದ್ದಾರೆ. ಸಮಾಜದಲ್ಲಿ ಯುವ ವರ್ಗದವರು ಸಂಪನ್ನಾರಾಗುವ ಅಗತ್ಯವಿದೆ.ಕ್ಷಣಿಕ ಸುಖಾದಿಗಳಲ್ಲಿ ತಮ್ಮನ್ನು ತಿಳಿಯದೇ ಮುನ್ನಡೆಯುತ್ತಿರುವ ಯುವಜನಾಂಗ ಧರ್ಮಾಸಕ್ತರಾಗಬೇಕು. ಶ್ರೀ ಹರಿಗುರು ಸೇವಾರೂಪದ ಚಾತುರ್ಮಾಸ.

ಚಿತ್ರ -ಲೇಖನ : ಮಂಜು ನೀರೇಶ್ವಾಲ್ಯ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English