- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರವಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು 410 ಕೊರೊನಾ ಸೋಂಕು ಪತ್ತೆ, 6 ಮಂದಿ ಸಾವು, ಉಡುಪಿ ಜಿಲ್ಲೆ 162

corona virus [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ರವಿವಾರ ಪತ್ತೆಯಾದ ಕೇಸುಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು (410) ಪಾಸಿಟಿವ್ ಪ್ರಕರಣ ವರದಿಯಾಗಿವೆ.

ದ.ಕ. ಜಿಲ್ಲೆಯಲ್ಲಿ ರವಿವಾರ 410 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇದೇ ವೇಳೆ 6 ಮಂದಿ ಸಾವನ್ನಪ್ಪಿದ್ದು, 264 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,943 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ 1,00,780 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 1,430 ಮಂದಿ ಸಾವನ್ನಪ್ಪಿದ್ದಾರೆ. 96,407 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು 82,634 ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದ್ದು, 1,00,42,417 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು,  ಇದರಿಂದ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.  ಜಿಲ್ಲೆ ಅನ್‌ಲಾಕ್ ಆದ ಸಂದರ್ಭ 200ರ ಗಡಿಯಲ್ಲಿದ್ದ ಕೋವಿಡ್ ಪ್ರಕರಣಗಳು ಈಗ 400ರ ಗಡಿ ದಾಟಿವೆ. ರವಿವಾರ ಬೆಂಗಳೂರು ನಗರ-409, ಉಡುಪಿ-163 ಮತ್ತು ಮೈಸೂರಿನಲ್ಲಿ 166 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಈ ಮೂಲಕ ರಾಜ್ಯದ ದಿನದ ಕೋವಿಡ್ ಪಟ್ಟಿಯಲ್ಲಿ ದ.ಕ. ಜಿಲ್ಲೆ ಪ್ರಥಮ ಸ್ಥಾನದದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರವಿವಾರ 162 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ  ಒಬ್ಬರು ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 66  ಮಂದಿ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ.ಪ್ರಸ್ತುತ 1425  ಸಕ್ರೀಯ ಪ್ರಕರಣಗಳು ಇವೆ.