- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದ ನೀರಜ್ ಚೋಪ್ರಾ

neeraj Chopra [1]ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಡೆದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ.

ಇದರೊಂದಿಗೆ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.

ಹಾಗೆಯೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ತಮ್ಮ ಎರಡನೇ ಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅಂತಿಮವಾಗಿ ಚಿನ್ನದ ಪದಕ ತಮ್ಮದಾಗಿಸಿದರು.

ನೀರಜ್ ಮೊದಲ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀಟರ್, 87.58 ಮೀಟರ್, ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ನಾಲ್ಕನೇ ಹಾಗೂ ಐದನೇ ಯತ್ನ ‘ಫೌಲ್’ ಆದರೂ ನೀರಜ್ ಗರಿಷ್ಠ ಸಾಧನೆಯನ್ನು ಪದಕ ಸುತ್ತಿನಲ್ಲಿದ್ದ ಯಾವ ಸ್ಪರ್ಧಿಯಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.