ವೇಣೂರು : ಸುಲ್ಕೇರಿ ಗ್ರಾಮದ ಪರಾರಿ ಎಂಬಲ್ಲಿ ಆ.10 ರ ಮಂಗಳವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಬುಧವಾರ ಶವವಾಗಿ ಪತ್ತೆಯಾಗಿದೆ.
ಜಂತಿಗೂಳಿಯ ಪರಾರಿ ನಿವಾಸಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗು ದೃತ್ವಿ ಯೊಂದಿಗೆ ಸುಲ್ಕೇರಿ ಯ ತವರು ಮನೆಯಲ್ಲಿ ವಾಸವಿದ್ದರು.
ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಎಂದು ಸನಿಹದ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ
ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದು ಮಗುವಿನ ಸುಳಿವು ಪತ್ತೆಯಾಗಿಲ್ಲ. ಮನೆಯಿಂದ 100 ಮೀಟರ್ ಅಂತರದಲ್ಲಿ ಹೊಳೆಯಲ್ಲಿಯೂ ಹುಡುಕಲಾಗಿತ್ತು.
ಇಂದು ಮುಂಜಾನೆ ಅದೇ ಹೊಳೆಯಲ್ಲಿ ಶವ ಪತ್ತೆಯಾಗಿದೆ.
Click this button or press Ctrl+G to toggle between Kannada and English