- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಾಲಿಬಾನಿಗಳ ಕೈಗೆ ಆಫ್ಘನ್​ ಅಧಿಕಾರ, ಉಗ್ರರ ಹೊಸ ಸರ್ಕಾರಕ್ಕೆ ಸಿದ್ಧತೆ

Afgahni [1]ಕಾಬೂಲ್ : ಅಫ್ಘಾನ್ ನಾಗರಿಕರನ್ನು ಲೂಟಿ ಮಾಡಿ ಅವರನ್ನು ವಿರೋಧಿಸಿದವರನ್ನು ಕೊಂದು ಈಗ ಅಫ್ಘಾನ್ ಸಂಪತ್ತನ್ನು ವಶ ಪಡಿಸಿಕೊಂಡಿರುವ ಉಗ್ರರಿಗೆ ಮತ್ತಷ್ಟು ಬಲ ಬಂದಿದೆ. ತಮ್ಮ ನಿಲುವನ್ನು ವಿಶ್ವಕ್ಕೆ ತೋರಿಸಲು ತಮ್ಮವರದ್ದೇ ಸರಕಾರ ಮಾಡಲು ಸಿದ್ಧತೆ ಮಾಡಿದ್ದಾರೆ.  ಕಳೆದ 20 ವರ್ಷಗಳಿಂದ ಅಧಿಕಾರದ ದಾಹದಲ್ಲಿ ಹಪಹಪಿಸುತ್ತಿದ್ದ ತಾಲಿಬಾನಿಗಳು ಕೊನೆಗೂ ಆಫ್ಘನ್ನಲ್ಲಿ ತಮ್ಮ ಅಧಿಕಾರದ ಚುಕ್ಕಾಣಿ ಯನ್ನು ಹಿಡಿದಿದ್ದಾರೆ. ಅಲ್ಲದೆ, ತಾಲಿಬಾನಿ ನಾಯಕರು ಶೀಘ್ರದಲ್ಲೇ ಹೊಸ ಸರ್ಕಾರವನ್ನೂ ಘೋಷಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಕಾಬೂಲ್‌ ನಲ್ಲಿ ನಡೆಯುತ್ತಿರುವ ಸ್ಥಳಾಂತರಿಸುವಿಕೆ ಮತ್ತು ಯುಎಸ್ ಭದ್ರತೆಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರ ಇಂದು ಸಂಜೆ 4 ಗಂಟೆಗೆ ಅಮೆರಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಜನರಿಂದ ಚುನಾಯಿತಗೊಂಡ ಸರ್ಕಾರ ಉರುಳಿದೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯ ನ ಮಾಡಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜನಪ್ರಿಯತೆ ತೀವ್ರ ಕುಸಿದಿದೆ. ಅವರ 7 ತಿಂಗಳ ಅಧ್ಯಕ್ಷತೆಯ ಅವಧಿಯಲ್ಲಿ ಅವರ ಅನುಮೋದನೆಯ ರೇಟಿಂಗ್‌ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಈ ಹಿನ್ನೆಲೆ ಬೈಡೆನ್‌ ಅವರನ್ನು ಬದಲಿಸಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕಮಲಾ ಹ್ಯಾರಿಸ್‌ ಅಧ್ಯಕ್ಷರಾಗುವ ಬಗ್ಗೆ ಒಲವು ವ್ಯಕ್ತವಾಗುತ್ತಿದೆ.