- MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಗ್ ಬಾಸ್ ವಿಜೇತ ಪಾವಗಡ ಮಂಜು ಧರ್ಮಸ್ಥಳದಲ್ಲಿ

pavagada-Manju [1]ಉಜಿರೆ : ಬಿಗ್ ಬಾಸ್ ವಿಜೇತ ಪಾವಗಡ ಮಂಜು ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹೆಗ್ಗಡೆಯವರು ಅವರನ್ನು ಗೌರವಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಬಳಿಕ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಅವರ ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ, ತಮ್ಮ ರಾಘವ ಮತ್ತು ತಂಗಿ ಮಾನಸ ಉಪಸ್ಥಿತರಿದ್ದರು.

ಪಾವಗಡ ಮಂಜು ಕಲರ್ಸ್ ಕನ್ನಡದ ಮಜಾ ಭಾರತದಲ್ಲಿ ಕಲಾವಿದರಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ತಮ್ಮ ಕುಟುಂಬದವರೊಂದಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಇದ್ದು ಕಲಾಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಹಂಬಲ ಹೊಂದಿರುವುದಾಗಿ ತಿಳಿಸಿದ್ದಾರೆ.