- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಿಢೀರನೇ ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ

Sanjana [1]ಬೆಂಗಳೂರು : ‘ಗಂಡ ಹೆಂಡತಿ’ ಖ್ಯಾತಿಯ ನಟಿ ಡ್ರಗ್ಸ್ ಸೇವಿಸಿದ್ದು ನಿಜ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮೂಲಕ ಸಾಬೀತಾಗಿದೆ. ಸದ್ಯ ಬಂಧನ ಭೀತಿಯಲ್ಲಿರುವ ನಟಿ ಸಂಜನಾ ಅನಾರೋಗ್ಯ ಎಂಬ ಕಾರಣ ಹೇಳಿ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ನಟಿ ಸಂಜನಾ ಗಲ್ರಾಣಿ ತಾಯಿ ರೇಷ್ಮಾ ಗಲ್ರಾಣಿ, ನಮ್ಮ ಹಣೆ ಬರಹ ಸರಿಯಾಗಿಲ್ಲ. ಏನ್ ಮಾಡೋದಕ್ಕೆ ಆಗೋದಿಲ್ಲ. ಸಂಜನಾ ಗಲ್ರಾಣಿಗೆ ಹುಷಾರಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರಿಗೆ ಊಟ ತೆಗೆದುಕೊಂಡು ಬಂದಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.