- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ  ಅವಕಾಶ ಕಲ್ಪಿಸಲಿ – ಕಲ್ಕೂರ

Pradeep Kumar Kalkura [1]ಮಂಗಳೂರು  : ಕೊರೋನಾ ಸೋಂಕಿನ ಹಿನ್ನಲೆಯಲ್ಲಿ 5 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಕ್ಕೆ ಸರಕಾರ ಅನುಮತಿಯನ್ನು ಕಲ್ಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಉತ್ಸವಾದಿ ಪೂಜಾ ಪ್ರಕ್ರಿಯೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೇದದ ಜತೆಗೆ ನಾದವಿದ್ದರಷ್ಟೇ ಪರಿಪೂರ್ಣತೆ. ಹಬ್ಬಗಳ ಆಚರಣೆಯ ಔಚಿತ್ಯ, ಯಕ್ಷಗಾನ, ನಾಟಕ, ಶಾಸ್ತಿçÃಯ ಸಂಗೀತ, ವಾದ್ಯ ಸಂಗೀತ ಉಪನ್ಯಾಸ, ಸಭಾಕಾರ್ಯಕ್ರಮ ಹೀಗೆ ಭಕ್ತಿಯ ತೃಷೆ ನೀಗಿಸುವುದರೊಂದಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ಪೂರಕವಾಗಿರುತ್ತದೆ.

ಕಲಾವೃತ್ತಿಯನ್ನೇ ನಂಬಿಕೊAಡು ಬದುಕು ಕಟ್ಟಿಕೊಂಡಿರುವ ಕಲಾವಿದರೆಲ್ಲರಿಗೂ ಈ ಕೊರೋನಾ ಕಾಲದಲ್ಲಿ ಸಾಂಸ್ಕೃತಿಕ ವೇದಿಕೆಗಳನ್ನು ಕಲ್ಪಿಸಿಕೊಟ್ಟು ವಿದ್ಯುನ್ಮಾನ ಮಾಧ್ಯಮಗಳ ಬಳಕೆಯ ಮೂಲಕ ಕಾರ್ಯಕ್ರಮ ಮನೆ ಮನೆ ತಲಪುವಂತೆ ಮಾಡುವುದು ಅತ್ಯಂತ ಸೂಕ್ತ ಎಂದು ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೋವಿಡ್-19 ಬಗ್ಗೆ ಜಾಗೃತಿಗಾಗಿ ಸರಕಾರದ ನಿರ್ದೇಶನಗಳನ್ನು ಖಡ್ಡಾಯವಾಗಿ ಪಾಲಿಸಿಕೊಂಡು ಕಲಾವಿದರಿಗೆ ಹಾಗೂ ಸಾರ್ವಜನಿಕರಿಗೆ ಉತ್ಸವಗಳಲ್ಲಿ ಭಾಗವಹಿಸುವುದಕ್ಕೆ ಅನುಕೂಲವಾಗುವಂತೆ ಈ ವಿಚಾರದ ಬಗ್ಗೆ ವಿಮರ್ಶೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸರಕಾರವನ್ನು ಒತ್ತಾಯಿಸಿದ್ದಾರೆ.