- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನರಿಂಗಾನ ಗ್ರಾಮದ ಮರೀಕಳದ ಕಸಾಯಿಖಾನೆಗೆ ಅಕ್ರಮ ದನ ಸಾಗಾಟ, ಒಬ್ಬ ಆರೋಪಿಯನ್ನು ಬಿಟ್ಟ ಪೊಲೀಸರು – ಬಜರಂಗದಳ ಖಂಡನೆ

Marikkala [1]ಮಂಗಳೂರು :  ಮುಡಿಪು ಸಮೀಪದ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರೀ ಶಾಲೆ ಸಮೀಪ ದ ಮರೀಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು ಕಾಣದ ಕೈಗಳ ಪ್ರಭಾವದಿಂದ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವ ಪೊಲೀಸ್ ಇಲಾಖೆಯ ಈ ಕೃತ್ಯ ಖಂಡನೀಯ ಎಂದು ಬಜರಂಗದಳ  ಹೇಳಿದೆ.

ನರಿಂಗಾನ ಗ್ರಾಮದ ಮರೀಕಳದಲ್ಲಿ ನಿರಂತರವಾಗಿ ದನಗಳನ್ನು ವಧೆಗೋಸ್ಕರ ಪಿಕ್ ಅಪ್ ವಾಹನ ಸಂಖ್ಯೆ KA 18 8539 ದಲ್ಲಿ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಮಾಹಿತಿ ಪ್ರಕಾರ ಈ ವಾಹನದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ದನಗಳನ್ನು ವಧೆಗೋಸ್ಕರ ಸಾಗಿಸುತ್ತಿರುವಾಗ ಬಜರಂಗದಳ ಮಾಹಿತಿ ಪ್ರಕಾರ ಕೊಣಾಜೆ ಠಾಣೆಯ ಪೊಲೀಸರು ವಾಹನವನ್ನು, ಎರಡು ದನದ ಜೊತೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರೂ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವುದರ ಹಿಂದೆ ಯಾವುದೊ ಕಾಣದ ಕೈಗಳ ಪ್ರಭಾವ ಸಂಶಯವಾಗುತ್ತಿದೆ. ಆರೋಪಿಗಳನ್ನು ವಶಕ್ಕೆ ಪಡೆದು 24 ಗಂಟೆ ಕಳೆದರು ಇನ್ನು ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವುದು ಖಂಡನೀಯ ಪೊಲೀಸ್ ವರಿಷ್ಠಾಧಿಕಾರಿಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕೇಸು ದಾಖಲಿಸುವಂತೆ ನೋಡಿಕೊಳ್ಳಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳ ಆಗ್ರಹಿಸುತ್ತದೆ ಎಂದು ಜಿಲ್ಲಾ ಗೋರಕ್ಷ ಪ್ರಮುಖರಾದ ಪ್ರದೀಪ್ ಪಂಪುವೆಲ್ ಮತ್ತು ಪವಿತ್ರ್ ಕೆರೆಬೈಲ್ ಹೇಳಿದ್ದಾರೆ.