- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆರ್ ಅಶೋಕ್ ರಣತಂತ್ರ, ದೊಡ್ಡಬಳ್ಳಾಪುರ ನಗರಸಭೆ ಬಿಜೆಪಿ ವಶಕ್ಕೆ

Doddaballapura [1]ದೊಡ್ಡಬಳ್ಳಾಪುರ  :  ಪ್ರತಿಷ್ಠಿತ ದೊಡ್ಡಬಳ್ಳಾಪುರ ನಗರಸಭೆಯನ್ನು ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ.
ಇಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಸುಧಾರಾಣಿ ಅಧ್ಯಕ್ಷರಾಗಿ, ಪರ್ಹಾನ್ ತಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ಮಾತನಾಡಿದ ಸಚಿವ ಆರ್ ಅಶೋಕ್ “ದೊಡ್ಡಬಳ್ಳಾಪುರ ಪುರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ನಾವು ಅಧಿಕಾರ ಹಿಡಿದಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ಜಿಲ್ಲೆ ಬಿಜೆಪಿ ವಶವಾಗಲಿದೆ. ಸುಮಾರು ಒಂದು ತಿಂಗಳಿನಿಂದ ಹೊಂದಾಣಿಕೆಯ ಪ್ರಕ್ರಿಯೆಯನ್ನು ನಾನೇ ಮುತುವರ್ಜಿ ವಹಿಸಿ ನಡೆಸಿದ್ದೆ. ಸ್ಥಳೀಯ ಜೆಡಿಎಸ್ ಮುಖಂಡನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಮೈತ್ರಿ ಮಾಡಿಕೊಂಡಿದ್ದೇವೆ. ನಾನು ದೊಡ್ಡಬಳ್ಳಾಪುರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಿದ್ದೇನೆ, ಸಾಕಷ್ಟು ಅನುದಾನ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ಒಟ್ಟಿನಲ್ಲಿ ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಿ, ಈ ಭಾಗದ ಅಭಿವೃದ್ಧಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಈ ಮೈತ್ರಿಗೆ ಸಹಕಾರ ನೀಡಿದ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದರು.

“ಕಾಂಗ್ರೆಸ್ ನವರು, ಜೆಡಿಎಸ್ ಬಿಜೆಪಿ ಬಿ ಟೀಮ್ ಎನ್ನುತ್ತಾರೆ. ಈ ಮೊದಲು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದಾಗ, ಜೆಡಿಎಸ್ ಕಾಂಗ್ರೆಸ್ ಬಿ ಟೀಮ್ ಆಗಿತ್ತಾ? ಹೀಗೆ ಮಾತನಾಡುತ್ತಾ ಕಾಲ ಕಳೆದರೆ ಕಾಂಗ್ರೆಸ್ ಸಿ ಟೀಮ್ ಆಗುವ ಕಾಲ ದೂರ ಇಲ್ಲ” ಎಂದು ಲೇವಡಿ ಮಾಡಿದರು.

ನಿನ್ನೆ ರಾತ್ರಿಯಿಡೀ ಸಭೆ ನಡೆಸಿದ ಆರ್ ಅಶೋಕ್ ಇಬ್ಬರು ಪಕ್ಷೇತರರಾದ ಸುರೇಶ್ ಮತ್ತು ಇಂದ್ರಾಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಜೆಡಿಎಸ್ ಸ್ಥಳೀಯ ನಾಯಕರ ವಿಶ್ವಾಸ ಗಳಿಸಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ದಕ್ಕುವಂತೆ ನೋಡಿಕೊಂಡರು. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು. ಚುನಾವಣೆ ಸಹ ಅಶೋಕ್ ನೇತೃತ್ವದಲ್ಲಿಯೇ ನಡೆದಿತ್ತು ಮತ್ತು ಅತಿ ಹೆಚ್ವು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.