- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅನ್ಯಾಯ ಎಸಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Hanagal Election [1]ಹಾನಗಲ್ : ಇಂದಿಗೂ ಕಾಂಗ್ರೆಸ್ ಪಕ್ಷ ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.‌

ಹಾನಗಲ್ ವಿಧಾನಸಭಾ ಕ್ಷೇತ್ರದ ಆಡೂರು ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಮತಯಾಚನೆ ಮಾಡಿದ ನಂತರ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಬ್ರಿಟಿಷ್ ವ್ಯಕ್ತಿ. ಒಡೆದಾಳುವುದು ಬ್ರಿಟಿಷರ ನೀತಿಯನ್ನು ಅವರು ಸದಾ ಅನುಸರಿಸಿಕೊಂಡು ಬಂದವರು. ಈಗ ಅದೇ ಸಂಸ್ಕೃತಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಹೀಗಾಗಿ ಕಾಂಗ್ರೆಸ್ಸನ್ನು ಪುಡಿ ಪುಡಿ ಮಾಡಿ ಎಂದು ಬೊಮ್ಮಾಯಿ ಕರೆ ನೀಡಿದರು.

ಅಲ್ಪಸಂಖ್ಯಾತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿ ಇತ್ತಲ್ಲ. ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಶ್ನಿಸಿದ ಅವರು ಬರೀ ಜಾತಿ ,ಮತ, ಪಂಥ ಇವುಗಳ ರಾಜಕೀಯವನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತರೊಳಗೂ ಉಪಜಾತಿಗಳನ್ನು ಹುಡುಕಿ ಒಡೆದು ಆಳುವ ಬ್ರಿಟಿಷ್ ನೀತಿ ಕಾಂಗ್ರೆಸ್ ಪಕ್ಷವನ್ನು ಅನುಸರಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಹೇಳಿದ್ರೂ ಜನ ತೀರ್ಮಾನ ಮಾಡಿದ್ದಾರೆ. ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ ಜಾತಿಯನ್ನೇ ಹಿಡಿದು ಜನರನ್ನು ಒಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಬಂಧುಗಳಿಗೆ ಕಾಂಗ್ರಸ್ ಏನು ಮಾಡಿದೆ. ಅವರ ಪರಿಸ್ಥಿತಿ ಏನಿತ್ತು ಹಾಗೆಯೇ ಇದೆ. ಈ ಸಮುದಾಯದ ಮಕ್ಕಳಿಗೆ 10 ವರ್ಷವಾದ ಕೂಡಲೇ ಕೈಯಲ್ಲಿ ಪುಸ್ತಕ ಪೆನ್ ಇರುವುದಿಲ್ಲ ಎಂದರು.

ಕೋವಿಡ್ ಸಂದರ್ಭದಲ್ಲಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದು ಭಾರತೀಯ ಜನತಾ ಪಕ್ಷ. ವಿವಿಧ ಸಂಘ ಸಂಸ್ಥೆಗಳಿಮದ 10-15 ಸಾವಿರ ಕಿಟ್‌ಗಳನ್ನು ಸಣ್ಣಪುಟ್ಟ ಸಂಸ್ಥೆಗಳು ಹಂಚಿವೆ. ಕಾಂಗ್ರೆಸ್ ಕಿಟ್ ಕೊಟ್ಟಿದ್ದನ್ನೇ ದೊಡ್ಡ ಬಂಡವಾಳ ಮಾಡುತ್ತಾರೆ ಎಂದರೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲೆಂದು ಮಾಡಿಲ್ಲ. ಚುನಾವಣೆ ದೃಷ್ಟಿಯಿಂದ ಹಂಚಿದ್ದಾರೆ.

ಭಾಜಪದ ಶಿವರಾಜ್ ಸಜ್ಜನರ್ ಅವರಿಗೆ ಮತ ಹಾಕಿ ತಾಲ್ಲೂಕಿನ ಅಭಿವೃದ್ಧಿಗೆ ಭವಿಷ್ಯವನ್ನು ಬರೆಯಿರಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಕಾಂಗ್ರೆಸ್ ಎಷ್ಟೇ ಗೋಣಿಚೀಲ ತಂದು, ಕತ್ತಲ ರಾತ್ರಿ ಮಾಡಿದರೂ ಎಲ್ಲವನ್ನೂ ಜನರು ವಾಪಸ್ಸು ಬೆಂಗಳೂರಿಗೆ ಮತ್ತು ಹುಬ್ಬಳಿಗೆ ಕಳಿಸುತ್ತಾರೆ. ಬರುವ ದಿನಗಳಲ್ಲಿ ಇಡೀ ಕರ್ನಾಟಕದಲ್ಲಿ ಅತಿ ಎತ್ತರದಲ್ಲಿ ಹಾನಗಲ್‌ನ್ನು ತೋರಿಸುವ ಕಾಲ ಬರಲಿದೆ ಎಂದರು.

ಕಾರ್ಮಿಕರು, ಶ್ರಮಜೀವಿಗಳು, ಕುರಿ ಕಾಯುವವರು, ನೇಕಾರರು ಎಲ್ಲಾ ವೃತ್ತಿಯ ಬಾಂಧವರೂ ಕೂಡ ನನ್ನ ಸಮುದಾಯದವರು. ಬದುಕನ್ನು ಹಂಚಿಕೊಂಡು ಬಾಳ್ವೆ ಮಾಡಿದ್ದೇವೆ. ಅದನ್ನೇ ಹಾನಗಲ್‌ನಲ್ಲಿ ಮಾಡುತ್ತಿದ್ದೇವೆ. ಎಲ್ಲಾ ಸಮುದಾಯವದರೂ ಒಂದಾಗಬೇಕು. ಒಂದಾಗಿ ದೇಶವನ್ನು ಕಟ್ಟೋಣ ಎಂದು ತಿಳಿಸಿದರು.