- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಿಕ್ಕಮ್ಮನ ಮೊಬೈಲ್ ಗೆ ಅಶ್ಲೀಲ ಸಂದೇಶ : ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

Santhosh [1]ಮಂಗಳೂರು: ಯುವಕನೋರ್ವ ಪ್ರಿಯತಮೆಯ ಚಿಕ್ಕಮ್ಮನ ಮೊಬೈಲಿಗೆ ಅಶ್ಲೀಲ ವೀಡಿಯೋ ಮಾಡಿ  ಕಳುಹಿಸಿದ್ದಲ್ಲದೆ, ಬೇರೆ ಬೇರೆ ಸಿಮ್ ಗಳಿಂದ ಕರೆಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದ.

ಮಹಿಳೆಯ ಅಕ್ಕನ ಮಗಳನ್ನು ಮೂಡಿಗೆರೆ ಮೂಲದ ಸಂತೋಷ್ ಎಂಬಾತ ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಆಕೆಯನ್ನು ಮಂಗಳೂರಿನಲ್ಲಿರುವ ಚಿಕ್ಕಮನ ಮನೆಯಲ್ಲಿ ಇರಿಸಿದ್ದರು. ಆದರೆ, ಸಂತೋಷ್ ಯುವತಿಯ ಮೊಬೈಲಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸುವುದು ಹಾಗೂ ಕರೆ ಮಾಡಿ ಮಾತನಾಡುವುದನ್ನು ಮುಂದುವರಿಸಿದ್ದ.

ಇದನ್ನು ತಿಳಿದ ಆಕೆಯ ಚಿಕ್ಕಮ್ಮ, ಯುವತಿಯ ಮೊಬೈಲ್‌ ಸಿಮ್ ಕಾರ್ಡನ್ನು ತೆಗೆದಿಟ್ಟಿದ್ದರು. ಆ ಬಳಿಕ ಆರೋಪಿ ಸಂತೋಷ್, ಹುಡುಗಿಯ ಚಿಕ್ಕಮ್ಮನ ಮೊಬೈಲ್ ಸಂಖ್ಯೆಗೆ ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡತೊಡಗಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಸಂತೋಷ್ ಕರೆ ಮಾಡುತ್ತಿದ್ದ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದರು.

ಆದರೆ ಈ ನಡುವೆ, ಸಂತೋಷ್ ಬೇರೊಂದು ಮೊಬೈಲ್ ಸಂಖ್ಯೆಯಿಂದ ಯುವತಿಯ ಚಿಕ್ಕಮ್ಮನ ಮೊಬೈಲಿಗೆ ಪುರುಷರ ಗುಪ್ತಾಂಗದ ನಗ್ನ ಚಿತ್ರವನ್ನು ಕಳುಹಿಸಿದ್ದಾನೆ. ಅಲ್ಲದೆ, ತನ್ನದೇ ಅಶ್ಲೀಲ ವೀಡಿಯೋ ಒಂದನ್ನು ಕಳುಹಿಸಿದ್ದಾನೆ. ಜೊತೆಗೆ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಮಾನಸಿಕ ಹಿಂಸೆಗೊಳಗಾದ ಮಹಿಳೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.