- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳವಾರ ಹಾಳಕೆರೆಯಲ್ಲಿ ಡಾ. ಸಂಗನಬಸವ ಮಹಾಸ್ವಾಮಿಗಳ ಸಮಾಧಿ

Sanganabasava [1]ಬೆಂಗಳೂರು  : ಕನ್ನಡ ನಾಡು ಕಂಡ ಅಪ್ರತಿಮ ಸಂತ-ಮಹಾಂತರಾಗಿ 8 ದಶಕಗಳ ಕಾಲ ನಾಡು -ನುಡಿಯ ಉದ್ದಾರಕ್ಕಾಗಿ ಶ್ರಮಿಸಿದ  ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ  ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಎಂಬತ್ತೈದು ವಯಸ್ಸಿನ ಡಾ. ಸಂಗನಬಸವ ಮಹಾಸ್ವಾಮಿಗಳು ಈ ದಿನ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬೆಳಗಿನ ಜಾವ 5 ಗಂಟೆಗೆ  ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ.

ಪರಮ ಪೂಜ್ಯ ಶ್ರೀಮದ ವೀರಶೈವ ಶಿವಯೋಗಿ ಮಂದಿರ ಅಧ್ಯಕ್ಷರು, ತಮ್ಮ ಜೀವನದದುದ್ದಕ್ಕೂ ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಆಹರ್ನಿಶಿ ಶ್ರಮಿಸಿದರು. ಅವರು ಮಾಡಿದ ಸೇವೆ ಕೆಲಸ ಕಾರ್ಯಗಳು ಅವಿಸ್ವಮರಾನಿಯ ಪ್ರತಿಷ್ಠಿತ ಬಾಗಲಕೋಟೆಯ ಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು ಬಳ್ಳಾರಿ ಹೊಸಪೇಟೆಯ ಶ್ರೀ ಕೊಟ್ಟೂರೇಶ್ವರ ಸಂಸ್ಥಾನ ಮಠದ ಅಧಿಪತಿಗಳಾಗಿದ್ದರು ಹಾಗೂ ಗದಗ ಜಿಲ್ಲೆಯ ಹಾಳಕೇರಿ ಅನ್ನದಾನೇಶ್ವರ್ ಸಂಸ್ಥಾನ ಮಠದ ಅಧಿಪತಿಗಳಗಿದ್ದರು. ತ್ರಿಕಾಲ ಪೂಜಾನಿಷ್ಠರು ಕಾಯಕ ಹಾಗೂ ದಾಸೋಹ ಯೋಗಿಗಳು, ಸರ್ವ ಧರ್ಮ ಸಮನ್ವಯ ಸಾಧನೆಗೆ ಹರಿಜನ-ಗಿರಿಜನ ಬಂಧುಗಳ ಮನೆಗೆ ಪಾದಯಾತ್ರೆ ಮಾಡಿದ ಹಾಗೂ ಸಾವಯವ ಕೃಷಿ ಮತ್ತು ಜೈವಿಕ ಇಂಧನ ಬಳಕೆಗೆ ಉತ್ತೇಜನ ನೀಡಲು ಚಕ್ಕಡಿ ಮೂಲಕ ಉಳವಿ ವರೆಗೆ ಯಾತ್ರೆ ಮಾಡಿದ್ದರು.

ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪಡೆದರು.  ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ , ಸಿ ಸಿ ಪಾಟೀಲ್ ಉಪಸ್ಥಿತರಿದ್ದರು.

ನಾಳೆ ಮಧ್ಯಾಹ್ನ 3 ಘಂಟೆಗೆ ಅವರ ಇಚ್ಛೆಯಂತೆ ಹಾಳಕೆರೆಯಲ್ಲಿಯೇ ಸಮಾಧಿ ಮಾಡಲಾಗುವುದು.