- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ACB raid [1]ಮಂಗಳೂರು : ಆದಾಯಕ್ಕಿಂತ ಹೆಚ್ಚಿನ ಆರೋಪ ಹೊತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಯಾಗಿರುವ ಕೆ.ಎಸ್.ಲಿಂಗೇಗೌಡ ಅವರ ಮನೆ ಮೇಲೆ ಇಂದು ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉರ್ವದಲ್ಲಿರುವ ಲಿಂಗೇ ಗೌಡ ಮನೆಗೆ ಇಂದು ಬೆಳಗ್ಗೆ ದಾಳಿ ಮಾಡಿದ ಏಳು ಮಂದಿ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ  ಅವರು ಹಲವು ವರ್ಷಗಳಿಂದ ಮಂಗಳೂರಿನಲ್ಲೇ ಬೇರೆ ಬೇರೆ ಹುದ್ದೆಯಲ್ಲಿ  ಸೇವೆ ನಿರ್ವಹಿಸಿದ್ದರು, ಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈ ಹಿಂದೆಯೂ ಲಿಂಗೇಗೌಡರ ಮನೆ ಮೇಲೆ ಎಸಿಬಿ ದಾಳಿಯಾಗಿತ್ತು.

ಈ ನಡುವೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಲಿಂಗೇಗೌಡ ಅವರ ಸ್ವಗ್ರಾಮ ಕಣ್ಣೂರು ಸೇರಿದಂತೆ ಅವರ ಸಂಬಂಧಿಗಳ ಮನೆಯನ್ನೂ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ತಂಡ ಜಾಲಾಡುತ್ತಿದೆ. ಗೌರಿ ಶಂಕರ ಕಲ್ಯಾಣ ಮಂಟಪ, ಹತ್ತಾರು ಎಕರೆ ಕೃಷಿ ಭೂಮಿ, ಮನೆಗಳು, ವಾಹನಗಳ ದಾಖಲೆ – ಆದಾಯದ ಮೂಲವನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸರಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ನಿಕಟವರ್ತಿಗಳ ಮನೆಗಳ ಮೇಲೆ ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಕಕಾಲಕ್ಕೆ ದಾಳಿ ನಡೆಸಿದೆ.