- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

7 ಅಭ್ಯರ್ಥಿಗಳ 13 ನಾಮಪತ್ರಗಳು ಕ್ರಮಬದ್ಧ, ಹಿಂಪಡೆಯಲು ನ.26 ರ ವರೆಗೆ ಅವಕಾಶ

nomination Fie [1]ಮಂಗಳೂರು  :  ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ ಸಲ್ಲಿಸಿದ್ದರು.
ಅವುಗಳ ಪರಿಶೀಲನೆ ನ.24ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಅವುಗಳಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕತಗೊಂಡಿದೆ.

13 ನಾಮಪತ್ರಗಳು ಕ್ರಮಬದ್ಧ: ಸಲ್ಲಿಕೆಯಾಗಿದ್ದ ಒಟ್ಟು 14 ನಾಮಪತ್ರಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ 3 ನಾಮಪತ್ರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ 4 ನಾಮಪತ್ರ, ಸೋಶಿಯಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಕೆ. ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿ ಕೌಶಿಕ್ ಡಿ. ಶೆಟ್ಟಿ  ಎರಡು ನಾಮಪತ್ರ, ಪಕ್ಷೇತರ ಅಭ್ಯರ್ಥಿ ನವೀನ್ ಕುಮಾರ್ ರೈ  ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ನಿತಿನ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಶಶಿಧರ ಎಂ ಅವರು ಸಲ್ಲಿಸಿದ್ದ ಒಂದು ನಾಮಪತ್ರ ಕ್ರಮಬದ್ದವಾಗಿದ್ದು, ಸ್ವೀಕೃತಗೊಂಡಿವೆ.

ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕತಗೊಂಡಿದೆ. ನಾಮಪತ್ರಗಳನ್ನು  ಹಿಂಪಡೆಯಲು ನ.26 ರ ವರೆಗೆ ಅವಕಾಶ ನೀಡಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.