- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸರಿಗೆ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ, 9 ಮಂದಿ ಆರೋಪಿಗಳ ಬಂಧನ

Gujjarakere Attack [1]ಮಂಗಳೂರು: ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು  ರಕ್ಷಣೆಗೆ ಧಾವಿಸಿದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ  ಮಡಿದ ಘಟನೆ ನಡೆದಿದೆ. ಈ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹಾದ್, ಅಬು ತಹರ್, ಮುಹಮ್ಮದ್ ನಾಸಿಫ್, ಆದರ್ಶ ಎಂದು ಗುರುತಿಸಲಾಗಿದ್ದು, ಒಟ್ಟು 16 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಯೆನೆಪೋಯ ಕಾಲೇಜಿನಲ್ಲಿ  3 ನೇ ವರ್ಷದ ಬಿಎಸ್ ಸಿ ಹಾಸ್ಪಿಟಾಲಿಟಿ ಸೈನ್ ಕಲಿಯುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಗುರುವಾರ ಸಂಜೆ ಸುಮಾರು 7 ಗಂಟೆಗೆ ವೇಳೆಗೆ ತನ್ನ ಸ್ನೇಹಿತ ಅಭಿರಾಮಿಯನ್ನು ಭೇಟಿ ಮಾಡಿ ಮಾತನಾಡಿಸುವಾಗ ಸಿನಾನ್ ಹಾಗೂ ಇತರ 8 ಜನ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆದರ್ಶ್ ಪ್ರೇಮಕುಮಾರ್ ಎಡಕೈ ಪ್ರಾಕ್ಟರ್‌ ಆಗಿದ್ದು, ಮೊಹಮ್ಮದ್ ನಸಿಪ್ ಗೆ ಗಾಯವಾಗಿದೆ. ಗಲಾಟೆ ಬಿಡಿಸಲು ಬಂದಿದ್ದ ಸ್ನೇಹಿತರಿಗೆ ಶನಿನ್ ಮತ್ತು ಶ್ರವಣ್ ರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುವುದಾಗಿ ಆದರ್ಶ ದೂರು ನೀಡಿದ್ದಾನೆ.

ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ರಕ್ಷಣೆ ನೀಡಲು ರಾತ್ರಿ 10.00 ಗಂಟೆ ಸುಮಾರಿಗೆ ಪಿಎಸ್‌ಐ ಶೀತಲ್ ಹಾಗೂ ಸಿಬ್ಬಂದಿಗಳು ಹಾಸ್ಟೆಲ್ ಬಳಿ ಹೋದಾಗ ಹಾಸ್ಟೆಲ್ ನ ಕೆಲವು ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ. ಫಹಾದ್, ಅಬು ತಹರ್, ಮೊಹಮ್ಮದ್ ನಾಸಿಪ್, ಆದರ್ಶ ದಸ್ತಗಿರಿಯಾದ ಆರೋಪಿಗಳು.

ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಸಕ್ತ ಪರಿಸ್ಥಿತಿ ಶಾಂತವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.