ಬಂಟವಾಳ ಕಾಶೀ ಮಠದ ವೃಂದಾವನ ಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ

1:10 PM, Tuesday, December 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Kashi mattaಮಂಗಳೂರು : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6 ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನ ದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಯು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಆದಿತ್ಯವಾರ ನೆರವೇರಿತು .

ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಪ್ರಯುಕ್ತ ಶಾಖಾ ಮಠದಲ್ಲಿ 10 ದಿನಗಳ ಪರ್ಯಂತ 108 ನಾರೀಕೇಳ ಗಣಹೋಮ , ಶ್ರೀ ಭಾಗವತ ಸಪ್ತಾಹ , ಶ್ರೀ ಸುದರ್ಶನ ಹವನ , ಶ್ರೀ ಭೂ ವರಾಹ ಹವನ , ಶ್ರೀ ನರಸಿಂಹ ಹವನ , ಶ್ರೀ ವಾಯುಸ್ತುತಿ ಹವನ , ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ , ದುರ್ಗಾ ನಮಸ್ಕಾರ , ಚಂಡಿಕಾ ಹವನ , ದಶಮ ಸ್ಕಂದ ಹವನ , ಸುಂದರಕಾಂಡ ಹವನಗಳು ಶ್ರೀಗಳವರ ಮಾರ್ಗದರ್ಶನದಲ್ಲಿ ನೆರವೇರಿದವು , ಪುನಃ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿಖರ ಕಲಶ ಅಧಿವಾಸ ಕಾರ್ಯಕ್ರಮಗಳು ವೈದಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನಡೆದವು .

ಆದಿತ್ಯವಾರ 10:46 ರ ಕುಂಭ ಲಗ್ನ ಮುಹೂರ್ತದಲ್ಲಿ ಪುನಃ ಪ್ರತಿಷ್ಠಾ ಕಾರ್ಯಕ್ರಮ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು ಬಳಿಕ ರಾತ್ರಿ ಶ್ರೀ ಮಾಧವೇಂದ್ರ ಸಭಾ ಸದನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು . ಶ್ರೀಗಳವರಿಂದ ದಾನಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಬಳಿಕ ಶ್ರೀಗಳವರ ಆಶೀರ್ವಚನ ನೆರವೇರಿತು . ಈ ಸಂದರ್ಭದಲ್ಲಿ ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಭಾಮಿ ನಾರಾಯಣ್ ಶೆಣೈ , ವೆಂಕಟ್ರಾಯ ಪೈ , ಜೆ . ಪುರುಷೋತ್ತಮ್ ಪೈ , ಬಿ . ಶಿವರಾಯ ಪ್ರಭು , ಬಿ . ಗಣೇಶ್ ಮಲ್ಯ , ಬಿ . ಮಹೇಶ್ ಬಾಳಿಗಾ , ಬಿ . ರಿತೇಶ್ ಬಾಳಿಗಾ , ಬಿ ವಿಜಯಾನಂದ ಶೆಣೈ . ತಿರುಮಲ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಬಿ . ಪುರುಷೋತ್ತಮ್ ಶೆಣೈ , ಏ . ಗೋವಿಂದ ಪ್ರಭು , ಪಿ . ಪ್ರವೀಣ್ ಕಿಣಿ , ಸೂರ್ಯನಾರಾಯಣ ಬಾಳಿಗಾ ಹಾಗೂ ಸಹಸ್ರಾರು ಭಜಕರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English