- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಮಾರ್ಟ್ ಸಿಟಿ ‘ಕ್ಲೀನ್ ಬೀಚ್’ ಜಾಗೃತಿಗಾಗಿ ಓಟ ಹಾಗು ಸ್ವಚ್ಛತಾ ಕಾರ್ಯಕ್ರಮ

Beach-Clean [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೆಡೈ ಮಂಗಳೂರು ಮತ್ತು ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ಮಾರ್ಟ್ ಸಿಟಿ ‘ಕ್ಲೀನ್ ಬೀಚ್’ ಜಾಗೃತಿಗಾಗಿ ಓಟ ಹಾಗು ಸ್ವಚ್ಚತಾ ಕಾರ್ಯಕ್ರಮ ಡಿ.26 ರಂದು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರಾವಳಿ ಜಿಲ್ಲೆಯ ಸೌಂದರ್ಯ, ನಮ್ಮ ಪ್ರವಾಸೋದ್ಯಮದ ಕನ್ನಡಿ ಎಂದರೆ ಅದು ನಮ್ಮ ಬೀಚ್‌ಗಳು. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ಸ್ವಚ್ಛವಾಗಿರುವುದರ ಜೊತೆಗೆ ಕಡಲ ತೀರವನ್ನು ಸ್ವಚ್ಛವಾಗಿ ಇರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಸ್ವಚ್ಛತೆಯ ಕುರಿತ ಜಾಗೃತಿಗಾಗಿ ಇಲಾಖೆಗಳು ಮತ್ತು ಮಾಧ್ಯಮಗಳು ಒಟ್ಟಾಗಿ ಕೆಲಸ‌ ಮಾಡಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ ನಮ್ಮ ಪರಿಸರ ಮತ್ತು ಬೀಚ್‌ಗಳನ್ನು ಸ್ವಚ್ಛವಾಗಿ ಸಂರಕ್ಷಿಸಬೇಕಾದ ಜವಾಬ್ದಾರಿ ಇದೆ ಎಂದು ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್, ನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಕ್ರೆಡೈ ಮಂಗಳೂರು ಇದರ ಅಧ್ಯಕ್ಷ ಪುಷ್ಪರಾಜ ಜೈನ್, ಕೆಐಒಸಿಎಲ್ ಜನರಲ್ ಮ್ಯಾನೇಜರ್ ರಾಮಕೃಷ್ಣ ರಾವ್.ಹೆಚ್, ಸೀನಿಯರ್ ಮ್ಯಾನೇಜರ್ ಮುರುಗೇಶ್, ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ, ಬೈಕಂಪಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ವಸಂತ ಅಮೀನ್, ಯತೀಶ್ ಬೈಕಂಪಾಡಿ, ಯಂಗ್ ಸ್ಟಾರ್ ಪಣಂಬೂರು ಅಧ್ಯಕ್ಷ ನವೀನ್ ಸಾಲಿಯಾನ, ಸಂತೋಷ್ ಗುರಿಕಾರ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಬೀಚ್ ಸ್ವಚ್ಚತಾ ಜಾಗೃತಿ ಓಟ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.