[1]ಮಂಗಳೂರು : ಕಾರು ಚಾಲಕರೊಬ್ಬರು ಮಂಗಳೂರು ಪುರಭವನದ ಬಳಿ ನಿಲ್ಲಿಸಿದ್ದ ಕಾರು ಧಗಧಗನೆ ಉರಿದು ಕಾರಿನ ಇಂಜಿನ ಸಮೇತ ಮುಂಭಾಗ ಬೆಂಕಿಗೆ ಆಹುತಿಯಾಯಿತು.
ಬುಧವಾರ ಸಂಜೆ ಕೊಣಾಜೆ ದಾಸರ ಮೂಳೆಯ ಕೃಷ್ಣಪ್ಪ ದಾಸ್ ಎಂಬವರು ಕಾರು ನಿಲ್ಲಿಸಿ ಆಸ್ಪತ್ರೆಗೆ ಹೋಗಿದ್ದರು. ಅಷ್ಟರಲ್ಲೇ ಅವರ ಇಂಡಿಕಾ ಐಸಿಎಸ್ ಬೆಂಕಿಗೆ ಆಹುತಿಯಾಗಿದೆ.
ಈ ಸಂದರ್ಭ ಕಾರಿನಲ್ಲಿ ಯಾರು ಇರದೇ ಇದ್ದುದರಿಂದ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ.
ಪಾಂಡೇಶ್ವರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.